Advertisement

ಬೆಳ್ತಂಗಡಿ ಮಿನಿ ವಿಧಾನಸೌಧ ನವೆಂಬರ್‌ನಲ್ಲಿ ಉದ್ಘಾಟನೆ

07:50 AM Aug 24, 2017 | Team Udayavani |

ವೇಣೂರು: ಬೆಳ್ತಂಗಡಿ ಮಿನಿ ವಿಧಾನಸೌಧದ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.

Advertisement

ಬುಧವಾರ ಅಳದಂಗಡಿ ಗ್ರಾ.ಪಂ. ವತಿಯಿಂದ ಪಂಚಾಯತ್‌ ವಠಾರದಲ್ಲಿ ಜರಗಿದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ವಿವಿಧ ಸವಲತ್ತುಗಳ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇನ್ನಷ್ಟು ಕಾಮಗಾರಿ
ಅಳದಂಗಡಿಯಲ್ಲಿ ಮಲೆಕುಡಿಯರ ಸಭಾಭವನ ಮಂಜೂರಾತಿಗೆ ಶ್ರಮವಹಿಸುತ್ತೇನೆ ಎಂದು ತಿಳಿಸಿದ ಅವರು, ಮುಖ್ಯಪೇಟೆಯಲ್ಲಿ 8 ಲ.ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಲ್ಕೇರಿ ಮೊಗ್ರುವಿನಲ್ಲಿ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು.

ಅಳದಂಗಡಿ ಗ್ರಾಮ ಪಂಚಾಯತ್‌ ಆಶ್ರಯದಲ್ಲಿ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆ, ಯೋಜನಾ ಉಪವಿಭಾಗ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ, ಬೆಳ್ತಂಗಡಿ ಕೆಆರ್‌ಐಡಿಎಲ್‌ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಬೆಳ್ತಂಗಡಿ ಶಾಸಕರ ಅನುದಾನದಲ್ಲಿ ಈ ಕಾರ್ಯಕ್ರಮ ಜರಗಿತು.

ಅಳದಂಗಡಿ ಗ್ರಾಮ ಪಂಚಾಯತ್‌ಅಧ್ಯಕ್ಷ ಸತೀಶ್‌ ಕುಮಾರ್‌ ಮಿತ್ತಮಾರ್‌ ಅಧ್ಯಕ್ಷತೆ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಅಳದಂಗಡಿ ತಾಲೂಕು ಪಂಚಾಯತ್‌ ಸದಸ್ಯೆ ವಿನುಷಾ ಪ್ರಕಾಶ್‌, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್‌ ಕೆ. ಕಾಶಿಪಟ್ಣ, ಬೆಳ್ತಂಗಡಿ ಎಪಿಎಂಸಿ ಸದಸ್ಯ ಚಿದಾನಂದ ಪೂಜಾರಿ, ಶಿರ್ಲಾಲು ತಾ.ಪಂ. ಸದಸ್ಯೆ ಜಯಶೀಲಾ ಕೆ. ಗೌಡ, ಅಳದಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸತೀಶ್‌ ಎಸ್‌., ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ, ಅಳದಂಗಡಿ ಚರ್ಚ್‌ನ ಧರ್ಮಗುರು ರೆ| ಫಾ| ಅಬೆಲ್‌ ಲೋಬೋ, ಸದಾನಂದ ಪೂಜಾರಿ ಉಂಗಿಲಬೈಲು, ಸತೀಶ್‌ ತಾಮನ್ಕರ್‌, ನಳಿನಿ ಪ್ರಶಾಂತ್‌ ವೇಗಸ್‌, ಸತೀಶ್‌ ಕುಮಾರ್‌ ಎಸ್‌.ಎಂ., ಗ್ರಾ.ಪಂ. ಸಂಪನ್ಮೂಲ ವ್ಯಕ್ತಿ ಸುಧೀರ್‌ ಪಟ್ಲ, ಪುಷ್ಪಲತಾ, ರಾಜೇಶ್‌ ಬುಣ್ಣಾನ್‌ ಪಿಲ್ಯ, ಪಡಂಗಡಿ ತಾ.ಪಂ. ಸದಸ್ಯೆ ಸುಶೀಲಾ, ಅಳದಂಗಡಿ ಪಂ. ಅಭಿವೃದ್ಧಿ ಅಧಿಕಾರಿ ಇಮಿ¤ಯಾಜ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

ಕೃಷಿ ಇಲಾಖೆಯಿಂದ ಫ‌ಲಾನುಭವಿಗಳಿಗೆ ಟಿಲ್ಲರ್‌ ಹಾಗೂ 94ಸಿ ಯೋಜನೆಯಡಿ ಹಕ್ಕುಪತ್ರ ವಿತರಣೆ ಜರಗಿತು. ಅಳದಂಗಡಿ ಗ್ರಾ.ಪಂ. ಸದಸ್ಯ ಸತೀಶ್‌ ಕುಮಾರ್‌ ಎಸ್‌.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ  ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು.  ಅಳದಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ  ಇಮಿ¤ಯಾಜ್‌ ವಂದಿಸಿದರು. ಅನೂಪ್‌ ಜೆ. ಪಾಯಸ್‌ ಕಾರ್ಯಕ್ರಮ ನಿರೂಪಿಸಿದರು.

ಸಹಾಯಧನ
ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿರುವ ಚಿದಾನಂದ ಮೂಲ್ಯ ಅವರಿಗೆ ಸುಲ್ಕೇರಿ ಮೊಗ್ರು ರಿûಾ ಚಾಲಕ-ಮಾಲಕರ ಸಂಘದಿಂದ 5,000 ರೂ. ದೇಣಿಗೆ ನೀಡಲಾಯಿತು. ಸುಲ್ಕೇರಿಮೊಗ್ರು ಶಾಲೆಯ ಗೌರವ ಶಿಕ್ಷಕಿಯವರಿಗೆ ಅಳದಂಗಡಿ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಒಂದು ತಿಂಗಳ ಗೌರವ ಧನವನ್ನು ನೀಡಲಾಯಿತು.

ಸಮ್ಮಾನ
ಶಾಸಕ ಕೆ. ವಸಂತ ಬಂಗೇರ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ, ಅಳದಂಗಡಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರಾ,  ವೇಣೂರು ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮಣಿ, ಗ್ರಾಮಕರಣಿಕ ಶಿವರಾಜ್‌, ಸಂತೋಷ್‌, ಎಂಜಿನಿಯರ್‌ ಮಹಮ್ಮದ್‌, ಕಂಟ್ರಾಕ್ಟರ್‌ ಮಹಮ್ಮದ್‌ ಮದ್ದಡ್ಕ, ರಫೀಕ್‌ ಕಟ್ಟೆ, ಅಳದಂಗಡಿ ಗ್ರಾ.ಪಂ. ಸ್ವತ್ಛತಾ ಸಿಬಂದಿ ಗಣೇಶ್‌, ಮೆಸ್ಕಾಂನ ಮೋಹನ್‌, ಗಣೇಶ್‌ ಅವರನ್ನು ಸಮ್ಮಾನಿಸಲಾಯಿತು.

ರಾಜಕೀಯ ರಹಿತ ಕೆಲಸ 
ತಾಲೂಕಿನ ಅಭಿವೃದ್ಧಿಯಲ್ಲಿ ರಾಜಕೀಯರಹಿತವಾಗಿ ದುಡಿದ ತೃಪ್ತಿ ಇದೆ. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಮತ್ತಷ್ಟು ಬೇಡಿಕೆಗಳು ಬರುತ್ತಿವೆ. ಅವಧಿಗೆ ಮುನ್ನ ಶಿರ್ಲಾಲು ರಸ್ತೆಯ ಅಭಿವೃದ್ಧಿಗೆ ಅನುದಾನ ಒದಗಿಸಲು ಶ್ರಮವಹಿಸುತ್ತೇನೆ. 
-ಕೆ. ವಸಂತ ಬಂಗೇರ
ಶಾಸಕ,ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿನಿಗ ಮದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next