Advertisement
ವೇಣೂರಿನ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ಎ. 7ರಂದು ರಾತ್ರಿ ವೇಣೂರು ಮಾಹಿತಿ ಬಂದ ಮೇರೆಗೆ, ಪಿಎಸ್ಐ ಶ್ರೀಶೈಲ ಡಿ. ಮುರಗೋಡ್, ಸಿಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ, ವೇಣೂರು ಡ್ಯಾಂ ಬಳಿ ಕರಿಮಣೇಲು ಗ್ರಾಮದ ನಿವಾಸಿ ಸತೀಶ್ (44) ಮತ್ತು ಮೂಡುಕೋಡಿ ಗ್ರಾಮದ ನವೀನ್ (35) ಎರಡು ಪಿಕಪ್ಗಳಲ್ಲಿ ತಲಾ 30 ಬುಟ್ಟಿಗಳಷ್ಟು ಮರಳನ್ನು ತುಂಬಿಸಿರುವುದು ಕಂಡುಬಂದಿತ್ತು.ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ದೃಢಪಟ್ಟಿದ್ದು, ವಾಹನಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.