Advertisement

Belthangady; ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ; ಆರೋಪ

11:33 PM Jan 15, 2024 | Team Udayavani |

ಬೆಳ್ತಂಗಡಿ: ಅಪರಿಚಿತರ ತಂಡವೊಂದು ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ವೇಣೂರು ಗ್ರಾ.ಪಂ. ಸದಸ್ಯ ಅನೂಪ್‌ ಜೆ. ಪಾಯಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಮೂಡುಕೋಡಿಯಲ್ಲಿ ಅಂಗಡಿಗೆ ತೆರಳಿ ವಾಪಸಾಗುತ್ತಿದ್ದ ವೇಳೆ ಗ್ರಾಮದಲ್ಲಿ ನನ್ನ ಅಭಿವೃದ್ಧಿ ಸಹಿಸದ ಕಿಡಿಗೇಡಿಗಳು ನನ್ನನ್ನು ದುರ್ಬಲಗೊಳಿಸಲು ತಂಡವನ್ನು ಛೂ ಬಿಟ್ಟು ಹಲ್ಲೆ ನಡೆಸಿದ್ದಾರೆ ಎಂದವರು ಆರೋಪಿಸಿದ್ದಾರೆ.

ಕಟ್ಟಿಗೆಯಿಂದ ತಲೆ ಹಾಗೂ ಕೈ ಭಾಗಕ್ಕೆ ಹಲ್ಲೆ ನಡೆಸಿದ್ದು, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೇನೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next