Advertisement
ಅಪಾಯದಲ್ಲಿದ್ದ ಕೆರೆ ನೀರುಚಾರ್ಮಾಡಿ ಅರಣ್ಯ ಭಾಗದಲ್ಲಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಗೆಯ ಕೃಷಿ ನೀರಿಗೆ ಆಧಾರವಾಗಿದೆ. ಈ ಬಾರಿ ಮಳೆಗೆ ಕೆರೆ ಸಂಪೂರ್ಣ ತುಂಬಿತ್ತು. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು ಅದನ್ನು ತೆರೆಯಲು ಸ್ಥಳೀಯಾಡಳಿತ ಮತ್ತು ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದ್ದರು. ಕೆರೆಯಲ್ಲಿ ಹೆಚ್ಚಿನ ನೀರು ತುಂಬಿರುವ ಕಾರಣ ಸಾಧ್ಯವಾಗಿರಲಿಲ್ಲ. ನೀರು ಹೊರಬಿಡದಿದ್ದಲ್ಲಿ ಕೆರೆ ನಾಲೆ ಅಥವಾ ಬದಿ ಒಡೆದು ಈ ಪರಿಸರದ ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೇಂದ್ರಾಳ ಮೊದಲಾದ ಪ್ರದೇಶಕ್ಕೆ ಆತಂಕ ಎದುರಾಗಿತ್ತು.
ಈಶ್ವರ್ ಮಲ್ಪೆ ಅವರ ತಂಡ ಶನಿವಾರ ಸ್ಥಳಕ್ಕಾಗಮಿಸಿ ಸುಮಾರು 20 ಅಡಿ ಆಳಕ್ಕೆ ಇಳಿದು ಪರಿಶೀಲಿಸಿತು. ಬೇಸಗೆ ಕಾಲದಲ್ಲಿ ನೀರು ಸಂಗ್ರಹಿಸಲು ಇಟ್ಟಿದ್ದ ಮರಳಿನ ಗೋಣಿಗಳು ಗೇಟಿಗೆ ಸಿಲುಕಿದ್ದನ್ನು ಗಮನಿಸಿ, ಅವುಗಳನ್ನು ಸ್ಥಳಾಂತರಿಸಿ ಗೇಟು ತೆರೆಯುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ, ಪೊಲೀಸ್, ಅಗ್ನಿಶಾಮಕ ಸಿಬಂದಿ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.