ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಎಂಬಲ್ಲಿ ಮೇ15ರಂದು ಪಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ನೀರು ನಾಯಿಗಳು (otters) ಕಂಡುಬಂದಿವೆ.
ಕಳೆದ ಡಿಸೆಂಬರ್ ಅವಧಿಯಲ್ಲಿ ಫಲ್ಗುಣಿ ನದಿಯಲ್ಲಿ ನೀರು ನಾಯಿಗಳು ಗೋಚರಿಸಿದ್ದವು. ಸ್ಥಳೀಯರಿಗೆ ಹಲವು ಬಾರಿ ಕಾಣ ಸಿಕ್ಕಿದ್ದವು. ಆದರೆ ಮೇ 15 ರಂದು ಅತ್ತ ತೌಖ್ತೇ ಚಂಡಮಾರುತ ಆವರಿಸುತ್ತಲೆ ನೀರುನಾಯಿಗಳು ನದಿಯನ್ನು ಬಿಟ್ಟು ಹಳ್ಳಕೊಳ್ಳ ಸೇರಿಕೊಂಡಿದೆ.
ಕುಬಳಬೆಟ್ಟು ಗುತ್ತು ಸಂಪತ್ ಕೊಂಬ ಅವರು ಹಳ್ಳದಲ್ಲಿ ನೀರು ನಾಯಿಗಳು ಕಂಡುಬಂದಿರುವುದನ್ನು ಗಮನಿಸಿ ವಿಡಿಯೋ ಚಿತ್ರೀಕರಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿವೆ.
ಇದನ್ನೂ ಓದಿ: ಸುಬ್ರಹ್ಮಣ್ಯ: ಮಗನ ಮಡಿಲಿಗೆ ವೃದ್ದೆ ತಾಯಿಯನ್ನು ಸೇರಿಸಿದ ಎಸ್ ಐ