ಬೆಳ್ತಂಗಡಿ : ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 13 ವರ್ಷಗಳಾದರೂ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗದಿ ರುವುದಕ್ಕೆ ಅಧಿಕಾರಿಗಳ ನಿರ್ಲಕ್ಷé ಮತ್ತು ಮಾಹಿತಿಯ ಕೊರತೆ ಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಮಂಟಪದಲ್ಲಿ ನಡೆದ ಅರಣ್ಯ ಹಕ್ಕು ಕಾಯ್ದೆಯ ಮಾಹಿತಿ ಕಾರ್ಯಾಗಾರ ಮತ್ತು ಅರಣ್ಯವಾಸಿಗಳೊಂದಿಗೆ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ನೀತಿಸಂಹಿತೆ ಮುಗಿದ ಬಳಿಕ ಒಟ್ಟಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಯಾವುದೇ ಕುಟುಂಬಗಳಿಗೆ ಅನ್ಯಾಯ ಆಗದಂತೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದರು. ಶ್ರೀಧರ್ ಗೌಡ ಈದು ಮಾತನಾಡಿ, ಅರಣ್ಯವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಅರಣ್ಯ ಹಕ್ಕುಪತ್ರ ತಿರಸ್ಕಾರ ಆಗಿದ್ದರೂ ಇತರ ಜಮೀನು ಇದ್ದಾಗ ಒಕ್ಕಲೆಬ್ಬಿಸಲು ಸಾಧ್ಯ ವಿಲ್ಲ. ಅರ್ಜಿಗಳನ್ನು ವಿಶೇಷ ಸಭೆ ನಡೆಸಿ ಹಕ್ಕುಪತ್ರ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಅಶೋಕ್ ಕುಮಾರ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಹೊಸ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಬಹುದು. ಅರಣ್ಯ ಹಕ್ಕುಪತ್ರ ಮಂಜೂರು ಮಾಡಲು ಅಧಿಕಾರ ಇರು ವುದು ಅರಣ್ಯ ಹಕ್ಕು ಸಮಿತಿಗಳಿಗೆ ಹೊರತು ಅರಣ್ಯ ಇಲಾಖೆಗೆಲ್ಲ. ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರುಣ್ಯ ಹಕ್ಕು ಕಾಯ್ದೆಯಲ್ಲಿ ಇಲ್ಲ ಎಂದು ತಿಳಿಸಿ ದರು. ತಜ್ಞರ ವರದಿಯ ಆಧಾರದ ಮೇಲೆ ವನ್ಯ ಜೀವಿಗಳ ಆವಾಸ ಸ್ಥಾನದಲ್ಲಿ ಹೊರತುಪಡಿಸಿ ಉಳಿದ ಎಲ್ಲ ರೀತಿಗಳ ಅರಣ್ಯಗಳಲ್ಲಿ ಹಕ್ಕುಪತ್ರ ನೀಡಬಹುದು. ಇತರ ಕಂದಾಯ ಜಮೀನು ಇದ್ದರೂ ಅರಣ್ಯ ಹಕ್ಕುಪತ್ರ ನೀಡಬೇಕು ಎಂದು ತಿಳಿಸಿದರು.
ಶ್ರೀನಿವಾಸ್ ಉಜಿರೆ, ಮಾಜಿ ತಾ.ಪಂ. ಸದಸ್ಯರಾದ ಜಯಂತ್ ಕೋಟ್ಯಾನ್, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯರಾದ ಸುಧೀರ್ ಸುವರ್ಣ, ಕೊರಗಪ್ಪ ಗೌಡ, ವಸಂತಿ, ಅಮಿತಾ, ಧನಲಕ್ಷ್ಮೀ ಜನಾರ್ದನ್, ಗ್ರಾ.ಪಂ. ಸದಸ್ಯರಾದ ರತ್ನಾ ಶಿಬಾಜೆ, ಕೇಶವ ದಿಡುಪೆ, ಕೃಷಿ ಪತ್ತಿನ ಸಹಕಾರ ಸಂಘ ಧರ್ಮಸ್ಥಳದ ನಿರ್ದೇಶಕ ಉಮಾನಾಥ್ ಧರ್ಮಸ್ಥಳ, ಶೀನಪ್ಪ ಮಲೆಂಕಿಲ ಉಪಸ್ಥಿತರಿದ್ದರು. ಹರೀಶ್ ಎಳನೀರ್ ಸ್ವಾಗತಿಸಿ ವಂದಿಸಿದರು.