Advertisement

Belthangady ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ

07:32 PM Jul 14, 2023 | Team Udayavani |

ಬೆಳ್ತಂಗಡಿ: ಈ ಬಾರಿಯ ವಿಧಾನ ಸಭಾ ಚುನಾವಣೆ ಸೋಲು ಗೆಲುವಿನ ವಿಮರ್ಶೆಗಾಗಿ ಸೇರಿದ್ದ ವೀಕ್ಷಕರ ಮುಂದೆಯೇ ರಕ್ಷಿತ್ ಶಿವರಾಂ ಸೋಲಿಗೆ ಬ್ಲಾಕ್ ಕಾಂಗ್ರೆಸ್ ನೇರ ಕಾರಣ ಎಂದು ಆತ್ಮೀಯ ಬಳಗವೊಂದು ಸಭೆಯಲ್ಲಿ ಗಲಭೆ ಎಬ್ಬಿಸಿದ ಘಟನೆ ಜು.14 ರಂದು ಸಂಜೆ ನಡೆದಿದೆ.

Advertisement

ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಸಹಿತ ಅಶ್ವಿನ್ ರೈ ಬಂಟ್ವಾಳ್ ವೀಕ್ಷಕರಾಗಿ ಸೇರಿದ್ದರು.

ಸಭೆ ಆರಂಭವಾಗುತ್ತಲೆ ರಕ್ಷಿತ್ ಶಿವರಾಂ ಆಪ್ತ ಬಳಗದ ರಾಜೇಶ್ ಭಟ್ ಸವಣಾಲು ಮತ್ತು ಪ್ರವೀಣ್ ಫೆರ್ನಾಂಡೀಸ್, ಸಚಿನ್ ನೂಜೋಡಿ ಸಹಿತ ಇತರರು ಅಶಿಸ್ತಿನಿಂದ ವರ್ತಿಸಿದ ಘಟನೆ ನಡೆಯಿತು.

ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆ ವೀಕ್ಷಕರಾಗಿ ಬಂದಿದ್ದ ಇಬ್ರಾಹಿಂ ಜತೆಗಿದ್ದರು. ಸೋಲಿಗೆ ಕಾರಣರಾದವರನ್ನು ವೀಕ್ಷಕರಾಗಿ ಹೇಗೆ ಕರಿಸಿದ್ದೀರಿ ಎಂದು ಸಭೆಯಲ್ಲಿ ಪ್ರಶ್ನಿಸಿದರಲ್ಲದೆ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಪುತ್ರ ಅಭಿನಂದನ್ ಹರೀಶ್ ಅವರನ್ನು ಏಕವಚನದಿಂದ ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದು ಗಲಾಟೆವರೆಗೆ ತಲುಪಿದ ಘಟನೆ ನಡೆಯಿತು.

ಈ ವೇಳೆ ರಕ್ಷಿತ್ ಶಿವರಾಂ ಬಳಗವನ್ನು ಸಭೆಯಿಂದ ಹೊರ ನಡೆಯುಂತೆ ಸೂಚಿಸಿದರಲ್ಲದೆ, ಸಭೆಯಿಂದ ಹೊರನಡೆಯುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಅಶಿಸ್ತಿನ ನಡೆ ಮತ್ತೆ ಭುಗಿಲೆದ್ದಿದೆ.

Advertisement

ತಕ್ಷಣ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಶಾಂತಗೊಳಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್ ಜಿ.ಗೌಡ, ಶೈಲೇಶ್ ಹಾಗೂ ಅಭಿನಂದನ್ ಹರೀಶ್ ಕುಮಾರ್ ಅವರು ಪ್ರತಿಕ್ರಿಯಿಸಿ , ಪ್ರವೀಣ್ ಫೆರ್ನಾಂಡಿಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಇಂದು ನಮ್ಮ ಕಾಂಗ್ರೆಸ್ ಪಕ್ಷದ ವೀಕ್ಷಕರ ಸಭೆಗೆ ಬಂದು ಗಲಭೆ ಎಬ್ಬಿಸಿದ್ದಾರೆ. ಶಿಸ್ತಿನ ಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿರುವುದು ಕಂಡು ಬಂದಿದೆ. ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಿದ್ದು ಕಂಡುಬಂದಿದೆ. ಮಾತ್ರವಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ತಳ್ಳಿದ್ದಾರೆ. ಈ ಕುರಿತು ಅಗತ್ಯವಾಗಿ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದ್ದಾರೆ. ಈ ವರೆಗೆ ಪಕ್ಷದೊಳಗಿದ್ದ ಭಿನ್ನಮತ ವೀಕ್ಷಕರ ಮುಂದೆ ಬೀದಿಗೆ ಬಂದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next