Advertisement
ಮಂಗಳೂರು-ಚಿಕ್ಕಮಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರಲ್ಲಿ 2019ರ ಆಗಸ್ಟ್ 8ರಂದು ಸಂಭವಿಸಿದ್ದ ಭೂ ಕುಸಿತದಿಂದ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 15ರಿಂದ 20 ಕಡೆ ಭೂಕುಸಿತವಾಗಿ 2 ತಿಂಗಳು ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿತ್ತು. ಅಂದಿನಿಂದ ಇಂದಿನ ವರೆಗೂ ಅತ್ಯಂತ ದೊಡ್ಡ ಗಾತ್ರದ ಘನವಾಹನಗಳು ಈಗಲೂ ಈ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಘಟನೆ ಸಂಭವಿಸಿ ಐದು ವರ್ಷಗಳಾಗುತ್ತಾ ಬಂದರೂ ಇನ್ನೂ ಶಾಶ್ವತವಾದ ಸುರಕ್ಷಾ ಕ್ರಮಗಳು ಆಗಿಲ್ಲ.
ಚಾರ್ಮಾಡಿ ಘಾಟಿಯ ಚಿಕ್ಕಮಗ ಳೂರು ಭಾಗದ ಮೂರು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ ಸಾಧ್ಯವಾಗಿಲ್ಲ. ಘಾಟಿಯ 75 ಕಿ.ಮೀ.ನಿಂದ 99 ಕಿ.ಮೀ.ವರೆಗೆ ರಸ್ತೆ ಅಗಲಗೊಳಿಸುವ ಹಾಗೂ ತಡೆಗೋಡೆ ರಚಿಸಿ ಸಾಯಿಲ್‌ನೇಲಿಂಗ್ ಟೆಕ್ನಾಲಜಿ ಅಳವಡಿಕೆಗೆ 225 ಕೋ.ರೂ.ನ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಆದರೆ ಇದು ಅರಣ್ಯ ಮತ್ತು ಹೆದ್ದಾರಿ ಇಲಾಖೆ ಗುದ್ದಾಟದಿಂದ ಹಳ್ಳ ಹಿಡಿದಿದೆ. ಈ ಹೆದ್ದಾರಿಯ ಭೂಕುಸಿತಗೊಂಡ 6 ಕಡೆಗಳಲ್ಲಿ 100ರಿಂದ 150 ಮೀಟರ್ ಉದ್ದದ ತಡೆಗೋಡೆ ರಚನೆ ಯಾಗಿದೆ. 26 ಹೊಸ ಮೋರಿಗಳು ಸಹಿತ ಬಿದ್ರುತಳ ಸಮೀಪ 3 ಕಡೆಗಳಲ್ಲಿ 10ರಿಂದ 15 ಮೀಟರ್ ಉದ್ದ ಹಾಗೂ 4ರಿಂದ 5 ಮೀಟರ್ ಎತ್ತರದ ರಿಟೇನಿಂಗ್ ವಾಲ್ ನಿರ್ಮಾಣವಾಗಿದೆೆ. ಪೂರ್ಣ ಗೊಂಡ ಕಾಮಗಾರಿಗಳ ಪೈಕಿ 4-5 ತಡೆಗೋಡೆಗಳು ದುರ್ಬಲಗೊಂ ಡಿದ್ದು, ಕೆಲವೆಡೆ ಬಿರುಕು ಬಿಟ್ಟಿವೆ.
Related Articles
Advertisement
ಬೆಳ್ತಂಗಡಿ ವಿಭಾಗ ಸದ್ಯ ಸುರಕ್ಷಿತಘಾಟಿ ಪ್ರದೇಶದಲ್ಲಿ ಬೆಳ್ತಂಗಡಿ ವಿಭಾಗಕ್ಕೆ ಸೇರುವ 10 ಹೇರ್‌ಪಿನ್ ಕರ್ವ್(ಯು ಆಕಾರದ ಟರ್ನ್)ಗಳಲ್ಲಿ ಸದ್ಯಕ್ಕೆ ಗಂಭೀರ ಆತಂಕವೇನೂ ಇಲ್ಲ. ಎರಡು ಕಡೆ ಮಾತ್ರ ರಸ್ತೆ ಅಂಚು ಕುಸಿದಿದ್ದರಿಂದ ಬ್ಯಾರಿಕೇಡ್ ಹಾಗೂ ರಿಫ್ಲೆಕ್ಟರ್ ಅಳವಡಿಸಲಾಗಿದೆ. ಬಂಡೆ ಕಲ್ಲುಗಳೇ ಇರುವ ಜೇನುಕಲ್ಲು ಬೆಟ್ಟದ ಕೆಳಭಾಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಿದ್ದು, ಕೆಳಭಾಗದಲ್ಲಿ ಸಣ್ಣಪುಟ್ಟ ಕಲ್ಲುಗಳು ಕುಸಿದು ರಸ್ತೆಗೆ ಬೀಳತೊಡಗಿವೆ. ಅಪಾಯಕಾರಿ ಮರಗಳು
ಗುಡ್ಡ ಕುಸಿಯಲು ಪ್ರಮುಖ ಕಾರಣವೇ ಅಪಾಯಕಾರಿ ಮರ ಗಳು. ವನ್ಯಜೀವಿ ಅರಣ್ಯ ವಿಭಾಗವು ಮಳೆಗಾಲಕ್ಕೆ ಮೊದಲು ರಸ್ತೆಗೆ ಭಾಗಿದ ಮರಗಳ ಗೆಲ್ಲುಗಳನ್ನು ಕಡಿಯುತ್ತಿಲ್ಲ. ಗಾಳಿಗೆ ಮರಗಳು ಬಿದ್ದು ಜೀವಕ್ಕೇ ಸಂಚಕಾರ ತರುವಂತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಮವಾದರೆ ಮಾತ್ರ ಪರಿಸ್ಥಿತಿ ಸುಧಾರಿಸೀತು ಎನ್ನುತ್ತಾರೆ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ. “ಚಾರ್ಮಾಡಿ ಘಾಟಿ ಬಗ್ಗೆ ಈಗಾಗಲೇ ಪರಿಶೀಲಿಸ ಲಾಗಿದ್ದು, ಮಂಗಳೂರು ವಿಭಾಗದಲ್ಲಿ ಯಾವುದೇ ಅಪಾಯ ವಿಲ್ಲ. ಚಿಕ್ಕಮಗಳೂರು ವಿಭಾಗದಲ್ಲಿ ಅಲ್ಲಿನ ಡಿಸಿ ಪರಿಸ್ಥಿತಿಯನ್ನು ಅವಲೋಕಿಸಿ ದ್ದಾರೆ. ಹಾನಿ ಪ್ರದೇಶದಲ್ಲಿ ಸುರಕ್ಷಾ ಕ್ರಮವಾಗಿ ಕಾಮಗಾರಿಗಳು ಪ್ರಗತಿಯಲ್ಲಿದೆ.” – ಶಿವಪ್ರಸಾದ್ ಅಜಿಲ, ಕಾರ್ಯಪಾಲಕ ಅಭಿಯಂತರ, – ಚೈತ್ರೇಶ್ ಇಳಂತಿಲ