Advertisement

Belthangady: ನಗರದ ಸೋಮಾವತಿ ನದಿ ನೀರಿಗೆ ವಿಷಪ್ರಾಶನ; ಸಾವಿರಾರು ಮೀನುಗಳ ಮಾರಣಹೋಮ

08:40 AM Apr 27, 2023 | Team Udayavani |

ಬೆಳ್ತಂಗಡಿ: ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದ್ದ ಸೋಮಾವತಿ ನದಿ ನೀರಿಗೆ ಕಿಡಿಕೇಡಿಗಳು ವಿಷ ಪದಾರ್ಥ ಹಾಕಿರುವ ಪರಿಣಾಮ ಸಾವಿರಾರು ಮೀನುಗಳ ಮಾರಹೋಮ ನಡೆದಿದೆ.

Advertisement

ಇಂದು ಬೆಳ್ಳಂ ಬೆಳಗ್ಗೆ ಘಟನೆ ವರದಿಯಾಗಿದ್ದು, ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ ಘಟಕಕ್ಕೆ ವಿಷ ಪ್ರಾಶನ ಮಾಡಿದ ಪರಿಣಾಮ ಸಾವಿರಾರು ಮೀನುಗಳ ಸತ್ತುಬಿದ್ದಿವೆ.

ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು.  ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರು ವರ್ಷ ಇದೇ ಸ್ಥಳದಲ್ಲಿ ಹಿಂದೊಮ್ಮೆ ಈ ರೀತಿಯ ಕೃತ್ಯ ನಡೆಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪಟ್ಟಣ ಪಂಚಾಯತ್ ಕೃತ್ಯದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಕುಡಿಯುವ ನೀರಿನ ಹಾಹಾಕಾರವಿರುವ ಸಮಯದಲ್ಲಿ ಇಂತಹ ಕೃತ್ಯ ನಡೆಸಿದವರ ವಿರುದ್ಧ ಜನರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿದ್ದು ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next