Advertisement

Belthangady ಆಶಾ ಕಾರ್ಯಕರ್ತೆ ಮೇಲೆ ಸುಳ್ಳು ಆರೋಪ, ಬೆದರಿಕೆ

12:49 AM Mar 10, 2024 | Team Udayavani |

ಬೆಳ್ತಂಗಡಿ: ಸುಳ್ಳು ಆರೋಪಗಳನ್ನು ಹೊರಿಸಿ, ಕರ್ತವ್ಯದ ಸಮಯ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಕುರಿತು ಆಶಾ ಕಾರ್ಯಕರ್ತೆ ಒಬ್ಬರು ವೇಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಶಿರ್ಲಾಲು ಗ್ರಾಮದ ಬಗ್ಯೋಟ್ಟು ಮನೆಯ ಮಾಧವ ಕುಲಾಲ್‌ ಶಿರ್ಲಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಜಯ ಲಕ್ಷ್ಮೀ ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಮೇಲಾಧಿಕಾರಿಗಳಿಗೆ ದೂರು ನೀಡುತ್ತಿದ್ದು, ಕೆಲಸಕ್ಕೆ ತೆರಳುವ ಸಮಯ ಆತನ ಆಟೋರಿಕ್ಷಾದಲ್ಲಿ ಹಿಂಬಾಲಿಸುತ್ತ ತೊಂದರೆ ನೀಡುತ್ತಿದ್ದ ಎಂದು ದೂರಲಾಗಿದೆ.

ಮಾ. 5ರಂದು ಪಲ್ಸ್‌ ಪೋಲಿಯೋ ಬಗ್ಗೆ ಗ್ರಾಮದಲ್ಲಿ ಮನೆ ಭೇಟಿ ವೇಳೆ ಅಂಗನವಾಡಿ ಕಾರ್ಯಕರ್ತೆ ಜತೆ ಮಾಧವ ಕುಲಾಲ್‌ ಮನೆಗೆ ತೆರಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಮಾನಕ್ಕೆ ಕುಂದುಂಟು ಮಾಡಿ, ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್‌ ಮೇಲೆ ಹಲ್ಲೆಗೆ ಯತ್ನ, ಐವರ ಸೆರೆ
ಬೆಳ್ತಂಗಡಿ: ಇಲ್ಲಿನ ತೆಂಕ ಕಾರಂದೂರು ಗ್ರಾಮದ ಪೆರಾಲ್ದ ಕಟ್ಟೆಯಲ್ಲಿ ಶಿವರಾತ್ರಿಯ ದಿನ ರಾತ್ರಿಯ ವೇಳೆ ರಸ್ತೆಯಲ್ಲಿ ದಾಂಧಲೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಈ ಘಟನೆಯ ಬಗ್ಗೆ ಮೂವರ ವಿರುದ್ಧ ಹಾಗೂ ಇತರ ಅಪರಿಚಿತರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿಯ ಮಹೇಶ್‌, ಸುರೇಶ್‌, ಅರುಣ್‌ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

Advertisement

ಠಾಣೆಯ ಎ.ಎಸ್‌.ಐ. ರಾಮಯ್ಯ ಅವರು ಯುವಕರ ತಂಡ ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದರು.

ಯುವಕರು ಸೋಡಾ ಬಾಟಲಿಗಳನ್ನು ಒಡೆದು ಹಾಕಿರುವುದನ್ನು ರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಆ ತಂಡ ಅವರ ಮೇಲೆ ದಾಳಿ ನಡೆಸಿದ್ದಲ್ಲದೇ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ರಾಮಯ್ಯ ಅವರು ನೀಡಿರುವ ದೂರಿನಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರಾಮಯ್ಯ ಅವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ: ವಿದ್ಯಾರ್ಥಿ ಆತ್ಮಹತ್ಯೆ
ಬೆಳ್ತಂಗಡಿ: ಮುಳಿಕ್ಕಾರು ನಿವಾಸಿ, ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ವಿಘ್ನೇಶ್ (19) ಮಾ.9ರಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿಂದಿನ ಕಾರಣ ತಿಳಿದುಬಂದಿಲ್ಲ. ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next