Advertisement
ನೆಕ್ಕಿಲು ಜಾರಿಗೆದಡಿ ಬಾಬು ಮಾಸ್ಟರ್ ಎಂಬವರ ತೋಟದಲ್ಲಿ ನ. 3ರ ಸಂಜೆ 3 ಗಂಟೆ ಹೊತ್ತಿಗೆ ಹೆಬ್ಬಾವು ಕಂಡಿತ್ತು. ಈ ವಿಚಾರವನ್ನು ಸ್ಥಳೀಯ ಆಟೋ ಚಾಲಕ ಬಶೀರ್ ಅವರು ಶೋಭಾ ಯಾನೆ ಆಶಾ ಅವರ ಗಮನಕ್ಕೆ ತಂದರು. ಶೋಭಾ ಸ್ಥಳಕ್ಕೆ ಹೋಗಿ ಹಾವನ್ನು ಸಾಹಸಿಕವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕೊಯ್ಯೂರು ಅರಣ್ಯಕ್ಕೆ ಬಿಟ್ಟಿದ್ದಾರೆ. ಆ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿತ್ತು.
ಶೋಭಾ ಯಾನೆ ಆಶಾ ಅವರು ಮೂಲತಃ ಮಾಣಿ ನಿವಾಸಿಯಾಗಿದ್ದು, ವೇಣೂರಿನ ಅಂಡಿಂಜೆಯ ಎಂ.ಪ್ರಶಾಂತ್ ಅವರೊಂದಿಗೆ ಮದುವೆಯಾಗಿದೆ. ಇವರ ತಂದೆ-ತಾಯಿ ಕುಪ್ಪೆಟ್ಟಿಯಲ್ಲಿ ನೆಲೆಸಿದ್ದು 5 ಮತ್ತು 3ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರ ಮತ್ತು ಪುತ್ರಿಯಿದ್ದಾರೆ. ಶೋಭಾ ಯಾನೆ ಆಶಾ ಅವರು ಕಳೆದ 21 ವರ್ಷಗಳಿಂದ ಹಾವನ್ನು ರಕ್ಷಿಸುತ್ತಿದ್ದು ಈ ವರೆಗೆ 900ಕ್ಕೂ ಅಧಿಕ ಹಾವಿನ ರಕ್ಷಣೆ ಮಾಡಿದ್ದಾರೆ. ಇವರ ಉರಗ ಪ್ರೇಮವನ್ನು ಕಂಡು ಗುರುವಾಯನಕೆರೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿಯಾಗಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾವುಗಳನ್ನು ರಕ್ಷಿಸುವ ಕಾರ್ಯದ ಜವಾಬ್ದಾರಿ ಇವರದು.
Related Articles
-ಶೋಭಾ ಯಾನೆ ಆಶಾ, ಉರಗ ರಕ್ಷಕಿ.
Advertisement
ಬಾಲ್ಯದಿಂದಲೇ ಉರಗಪ್ರೇಮಿಶೋಭಾ ಎಳೆಯ ವಯಸ್ಸಿನಲ್ಲೇ ಸಣ್ಣಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದರು! ಇದನ್ನು ಗಮನಿಸಿದ ಮನೆಯವರು ಹಾವು ವಿಷಕಾರಿ, ಹಿಡಿಬಾರದು ಎಂದು ಬುದ್ದಿಮಾತು ಹೇಳಿ ಹಾವು ಹಿಡಿಯುವುದನ್ನು ನಿಲ್ಲಿಸಿದ್ದರು. 2014ರಲ್ಲಿ ವಿವಾಹವಾದ ಬಳಿಕ ಪತಿ ಪ್ರಶಾಂತ್ ಅವರು ಶೋಭಾರಿಗೆ ಹಾವು ಹಿಡಿಯಲು ಪ್ರೋತ್ಸಾಹ ನೀಡಿದರು ಮತ್ತು ಸಹಕಾರ ನೀಡುತ್ತಿದ್ದಾರೆ. ಪ್ರಶಾಂತ್ ಅವರು ಹುಲ್ಲು ಕಟಾವು ಯಂತ್ರದ ಕೆಲಸ ಮಾಡುತ್ತಾರೆ. ಶೋಭಾ ಅವರ ಉರಗ ಪ್ರೇಮ ತಿಳಿದ ಆಗಿನ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡರು ವಲಯ ಮೇಲ್ವಿಚಾರಕಿಯಾಗಿದ್ದ ವಿದ್ಯಾ ಬಿ.ಎಚ್. ಬಳಿ ತಿಳಿಸಿದರು. ಆಗ ಶೋಭಾರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರಿಸಲಾಯಿತು. ಬಳಿಕ ಲಾೖಲದಲ್ಲಿ ನಡೆದ ಎನ್ಡಿಆರ್ಎಫ್ನ ತರಬೇತಿಯಲ್ಲಿ ಭಾಗವಹಿಸಿ ಸ್ನೇಕ್ ಜಾಯ್ರಿಂದ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಇವರಿಗೆ ಎಲ್ಲ ರಕ್ಷಣಾ ಸಾಮಗ್ರಿ ನೀಡಿದರೂ ಈಕೆ ಕೇವಲ ಕೈಯಿಂದಲೇ ಹಾವನ್ನು ಹಿಡಯುವುದು ವಿಶೇಷ. -ಚೈತ್ರೇಶ್ ಇಳಂತಿಲ