Advertisement
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಾಲ್ಕು ರಸ್ತೆಗಳ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಬಳಿಕ ಉಜಿರೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯಸರಕಾರಕ್ಕೆ 2009ರಿಂದ 2014ರ ವರೆಗೆ ಯುಪಿಎ ಸರಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಅನುದಾನವನ್ನು ಗ್ರಾಮಸಡಕ್ ಯೋಜನೆಯಡಿ ನೀಡಿಲ್ಲ. 2014ರ ಬಳಿಕ ನರೇಂದ್ರ ಮೋದಿ ಅವರು ಕೇಂದ್ರ ರಸ್ತೆ ನಿಧಿಯಡಿ ದ.ಕ.ಜಿಲ್ಲೆಗೆ 150 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಅದರಲ್ಲಿ ಅತೀ ಹೆಚ್ಚು 52 ಕೋ.ರೂ. ಅನುದಾನ ಬೆಳ್ತಂಗಡಿ ತಾಲೂಕಿಗೆ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಪ್ರಧಾನ ಮಂತ್ರಿಗಳ ಅಭಿವೃದ್ಧಿಶೀಲ ಚಿಂತನಯಂತೆ ಬೆಳ್ತಂಗಡಿಗೆ ಅತೀಹೆಚ್ಚು 500ರಿಂದ 600 ಕೋಟಿ ರೂ. ಅನುದಾನ ಬಿಡುಗಡೆ ಗೊಳಿಸುವಲ್ಲಿ ಸಂಸದ ನಳಿನ್ ಕುಮಾರ್ ಅವರ ಪ್ರೋತ್ಸಾಹ ಅಮೂಲ್ಯ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತೀ ಬೂತ್‌ಗೆ 10 ಲಕ್ಷ ರೂ.ಗಳ ವಿಶೇಷ ಅನುದಾನ ಒದಗಿಸಲಾಗಿದೆ. ಈ ಮೂಲಕ ಟೀಕಾಕಾರರ ಅಪಪ್ರಚಾರಕ್ಕೆ ಅಭಿವೃದ್ಧಿಯಿಂದಲೇ ಉತ್ತರ ನೀಡಿದ್ದೇವೆ ಎಂದು ತಿಳಿಸಿದರು.
Related Articles
Advertisement
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್ ಸ್ವಾಗತಿಸಿ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ ವಂದಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.
ಕಾಮಗಾರಿ ವಿವರರಸ್ತೆ ಮೊತ್ತ
ಪರಪ್ಪು³-ಆದೂರು ಪೆರಾಲ್ 5.20 ಕೋಟಿ ರೂ.
ಲಾೖಲ-ಕೋಟಿಕಟ್ಟೆ 7.93 ಕೋ.ರೂ.
ಬೀಜತ್ತಡಿ-ಪಾರ್ಪಿಕಲ್ಲು 10.52 ಕೋ.ರೂ.
ಉಜಿರೆ-ಕುಪ್ಪೆಟ್ಟಿ 28.96ಕೋ.ರೂ.
ಒಟ್ಟು: 47.71 ಕಿ.ಮೀ.; 52.61 ಕೋಟಿ ರೂ. ಶೀಘ್ರ ಪುಂಜಾಲಕಟ್ಟೆ-ಚಾರ್ಮಾಡಿ ಚತುಷ್ಪಥ
ಈಗಾಗಲೇ ಬಿ.ಸಿ.ರೋಡ್- ಪುಂಜಾಲಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಶೀಘ್ರವಾಗಿ ಎರಡನೇ ಹಂತದಲ್ಲಿ ಪುಂಜಾಲಕಟ್ಟೆಯಿಂದ -ಚಾರ್ಮಾಡಿ ವರೆಗೆ ಚತುಷ್ಪಥವಾಗಿಸಲಾಗುವುದು. ರಸ್ತೆ ಅಭಿವೃದ್ಧಿಗೆ ಸ್ವಯಂ ಪ್ರೇರಿತಾಗಿ ಅಗತ್ಯ ನಿವೇಶನ ಬಿಟ್ಟುಕೊಡುವ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಜನತೆ ಕೈಜೋಡಿಸಬೇಕು.
– ನಳಿನ್ ಕುಮಾರ್ ಕಟೀಲು, ದಕ್ಷಿಣ ಕನ್ನಡ ಸಂಸದ