Advertisement

Belthangady: ಜಾನುವಾರು ಅಕ್ರಮ ಸಾಗಾಟ; ಆರೋಪಿ ಬಂಧನ

08:55 PM Aug 14, 2023 | Team Udayavani |

ಬೆಳ್ತಂಗಡಿ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ರವಿವಾರ ಬೆಳಗ್ಗೆ ಚಾರ್ಮಾಡಿ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಪತ್ತೆ ಹಚ್ಚಲಾಗಿದೆ. ಈ ವೇಳೆ ಪ್ರಮುಖ ಆರೋಪಿ ಪರಾರಿಯಾಗಿದ್ದು, ಚಾಲಕನನ್ನು ಬಂಧಿಸಲಾಗಿದ್ದು, ವಾಹನ ಹಾಗೂ ಮೂರು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಮೂಡಿಗೆರೆ ತಾಲೂಕು ಕೂಡಹಳ್ಳಿ ಗ್ರಾಮದ ಕೆ.ಕೆ. ಪದ್ಮೇಶ್‌ (41) ಎಂಬಾತನಾಗಿದ್ದು, ಸಾಲೆತ್ತೂರು ನಿವಾಸಿ ಹಮೀದ್‌ ಪರಾರಿಯಾಗಿದ್ದಾನೆ. ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಕೆಎ. 18 ಸಿ. 2855 ನೊಂದಣಿ ಸಂಖ್ಯೆಯ ವಾಹನ ಅತಿವೇಗದಲ್ಲಿ ಬಂದುದನ್ನು ತಡೆದ ಪೊಲೀಸರು ಯಾವುದೇ ಪರವಾನಿಗೆ ಇಲ್ಲದೆ ಮೂರು ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಮೂರು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣ ಕಾಯ್ದೆ-2020 ಮತ್ತು ಕಲಂ: 66 ಜತೆಗೆ 192(ಎ) ಐಎಂವಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next