Advertisement

ಬೆಳ್ತಂಗಡಿ : ಅಕ್ರಮವಾಗಿ ಶೇಖರಿಸಿಟ್ಟ ಪಡಿತರ ಚೀಟಿಯ 14 ಕ್ವಿಂಟಾಲ್ ಅಕ್ಕಿ ವಶ

07:55 PM Jun 01, 2022 | Team Udayavani |

ಬೆಳ್ತಂಗಡಿ : ಇಲ್ಲಿನ ಗೇರುಕಟ್ಟೆ ಸಮೀಪದ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟ 14 ಕ್ವಿಂಟಾಲ್ ಗೂ ಅಧಿಕ ಅನ್ನಭಾಗ್ಯ ಪಡಿತರವನ್ನು ಜೂ.1 ರಂದು ಸಂಜೆ 5 ಗಂಟೆ ಸುಮಾರಿಗೆ ತಹಶೀಲ್ದಾರ್ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ.

Advertisement

ಗೇರುಕಟ್ಟೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ವಾಹನದಲ್ಲಿ ಸಾಗಾಟಕ್ಕೆ ಮಾಡಲು ಯತ್ನಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಜಪ್ತಿವೇಳೆ 14 ಕ್ವಿಂಟಾಲ್ ಗೂ ಅಧಿಕ ಪಡಿತರ ಕಂಡುಬಂದಿದೆ. ಈ ಕುರಿತು ತಹಶೀಲ್ದಾರ್ ಮಹೇಶ್ ಜೆ., ಆಹಾರ ನಿರೀಕ್ಷಕರಾದ ವಿಶ್ವ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಸ್ಥಳದಲ್ಲಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಎಸ್.ಐ. ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಳೆದ ಒಂದು ವಾರಗಳ ಹಿಂದೆ ಕಕ್ಕಿಂಜೆಯಿಂದ ಮೂಡಿಗೆರೆಗೆ ಸಾಗಿಸುತ್ತಿದ್ದ 33 ಕ್ವಿಂಟಾಲ್ ಅಕ್ರಮ ಪಡಿತರವನ್ನು ಟೆಂಪೋ ಸಹಿತ ಚಾರ್ಮಾಡಿ ಚೆಕ್ ಫೊಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿತ್ತು. ಇದೀಗ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.

ದ.ಕ.ಜಿಲ್ಲೆಯಲ್ಲಿ ಇಂತಹಾ ಪ್ರಕರಣ ಆಗಾಗ ಕಂಡು ಬರುತ್ತಿದ್ದು, ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

ಇದನ್ನೂ ಓದಿ : ಶೈ ಹೋಪ್‌ ಅಜೇಯ ಶತಕ; ನೆದರ್ಲೆಂಡ್ಸ್‌ ವಿರುದ್ಧ ವೆಸ್ಟ್‌ ಇಂಡೀಸ್‌ 7 ವಿಕೆಟ್‌ಗಳ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next