Advertisement

Beltangadi: ರೋಗ ಗುಣಪಡಿಸುವುದಾಗಿ ಹೇಳಿ ವಂಚನೆ

12:37 AM Feb 02, 2024 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯ ಮನೆಗೆ ಬಂದ ಇಬ್ಬರು ವ್ಯಕ್ತಿಗಳು ಮಲಗಿದ್ದಲ್ಲಿಯೇ ಇದ್ದ ವ್ಯಕ್ತಿಯನ್ನು ಗುಣಪಡಿಸುವುದಾಗಿ ಹೇಳಿ 30 ಸಾವಿರ ರೂ. ನಗದು ಹಣ ಪಡೆದುಕೊಂಡು ಪರಾರಿಯಾದ ಘಟನೆ ಸಂಭವಿಸಿದೆ.

Advertisement

ಮುಂಡಾಜೆ ಗ್ರಾಮದ ನಿವಾಸಿ ದಯಾನಂದ ವಂಚನೆಗೆ ಒಳಗಾದ ವ್ಯಕ್ತಿ. ಇವರ ತಂದೆ ಕಟ್ಟಡದಿಂದ ಬಿದ್ದು ಸೊಂಟದ ಬಲ ಕಳೆದುಕೊಂಡು ಮಲಗಿದಲ್ಲಿಯೇ ಇದ್ದರು. ಜ. 27ರಂದು ಅವರ ಮನೆಗೆ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ತಾವು ಆಯುರ್ವೇದ ಪಂಡಿತರು. ಪಂಚ ಕರ್ಮ ಆಯುರ್ವೇದ ಔಷಧಿಯಿಂದ ಅವರನ್ನು ಗುಣಪಡಿಸುವುದಾಗಿ ಹೇಳಿದ್ದರು.

ಬಳಿಕ ಚಿಕಿತ್ಸೆಗೆಂದು ಕೆಲವು ವಸ್ತುಗಳನ್ನು ತರಿಸಿಕೊಂಡಿದ್ದಾರೆ. ಇನ್ನಷ್ಟು ಔಷಧಗಳು ತರಬೇಕೆಂದು 30 ಸಾವಿರ ರೂ. ಹಣ ಪಡೆದುಕೊಂಡು ಮೊಬೈಲ್‌ ನಂಬರ್‌ ಒಂದನ್ನು ನೀಡಿ ತೆರಳಿದ್ದಾರೆ.
ಆದರೆ ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗಿ ತಾವು ಮೋಸಗೊಂಡಿದ್ದೇವೆ ಎಂದು ತಿಳಿದು ದಯಾನಂದ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ತಂಡ ಮುಂಡಾಜೆಯ ಕೆಲವು ಮನೆಗಳಿಗೆ ಭೇಟಿ ನೀಡಿದ್ದು ಹಾಗೂ ಕೆಲವರಿಗೆ ಔಷಧ ನೀಡಿ ಹಣ ಪಡೆದಿದ್ದರು ಎನ್ನಲಾಗಿದೆ. ಇವರು ತಾವು ಶಿವಮೊಗ್ಗದಿಂದ ಬಂದವರು ಎಂದು ಪರಿಚಯಿಸಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಇವರ ಹಿನ್ನೆಲೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next