Advertisement

ಬೆಳ್ಮಣ್‌ ಟೋಲ್‌ಗೇಟ್‌: ಕಾರ್ಕಳ-ಪಡುಬಿದ್ರಿ ಹೆದ್ದಾರಿ ಬಂದ್‌ ಯಶಸ್ವಿ

02:35 AM Dec 21, 2018 | Team Udayavani |

ಕಾರ್ಕಳ: ಬೆಳ್ಮಣ್‌ನಲ್ಲಿ ಕರೆನೀಡಿದ್ದ ಟೋಲ್‌ಗೇಟ್‌ನ ವಿರುದ್ಧ ಗುರುವಾರ ನಡೆದ ಬೃಹತ್‌ ಪ್ರತಿಭಟನೆ ಹಾಗೂ ಕಾರ್ಕಳ ಪಡುಬಿದಿರೆ ಹೆದ್ದಾರಿ ಬಂದ್‌ ಸಂಪೂರ್ಣ ಯಶಸ್ವಿಯಾಗಿ ನಡೆದಿದೆ. ಸುಮಾರು 3,000ಕ್ಕೂ ಮಿಕ್ಕಿದ ಜನರನ್ನೊಳಗೊಂಡ ಪ್ರತಿಭಟನೆ ಮೆರವಣಿಗೆಯ ಮೂಲಕ ಬೆಳ್ಮಣ್‌ ಚರ್ಚ್‌ ಬಳಿಯ ಪೆಟ್ರೋಲ್‌ ಪಂಪ್‌ವರೆಗೆ ಸಾಗಿ ಹಿಂದೆ ಬಂದು ನಂದಳಿಕೆ ಬೋರ್ಡ್‌ ಶಾಲೆಯವರೆಗೆ ಸಾಗಿ ಮತ್ತೆ ಬಸ್‌ ನಿಲ್ದಾಣಕ್ಕೆ ವಾಪಸಾಯಿತು. ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿಗಳಿಗೆ ಟೋಲ್‌ ವಿರುದ್ಧದ ಮನವಿ ನೀಡಲಾಯಿತು. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಬಳಿಕ ಪ್ರತಿಭಟನಾಕಾರರು ನಡು ರಸ್ತೆಯಲ್ಲಿ ಮಲಗಿ, ಕುಳಿತು ಘೋಷಣೆ ಕೂಗಿದಾಗ ಕಾರ್ಕಳ ಪೊಲೀಸರು ಸುಹಾಸ್‌ ಹೆಗ್ಡೆ ಸಹಿತ ಹಲವರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

Advertisement


ಟೋಲ್‌ ವಿರೋಧಿ ಸಮಿತಿ ನೀಡಿದ್ದ ಬಂದ್‌ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ಮಧ್ಯಾಹ್ನದವರೆಗೆ ಯಾವುದೇ ವಾಹನ ಸಂಚರಿಸಲಿಲ್ಲ. ಮಂಗಳೂರಿನಿಂದ ಬಂದ ವಾಹನಗಳು ಪಡುಬಿದ್ರೆಯಿಂದಲೇ ವಾಪಸಾದವು. ಕಿನ್ನಿಗೋಳಿಯಿಂದ ಬಂದ ವಾಹನಗಳು ಮುಂಡ್ಕೂರಿನಿಂದಲೇ ಸಂಚಾರ ಮೊಟಕುಗೊಳಿಸಿದ್ದವು. ಬೆಳ್ಮಣ್‌ ಪೇಟೆಯ ಎಲ್ಲ ಆಂಗಡಿಗಳು ಮುಚ್ಚಿದ್ದು, ರಿಕ್ಷಾ, ಕಾರು ಸಹಿತ ಎಲ್ಲ ವಾಹನ ಮಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಿಟ್ಟೆ ವಿದ್ಯಾ ಸಂಸ್ಥೆ ಸಹಿತ ಬೆಳ್ಮಣ್‌ ಪರಿಸರದ ಎಲ್ಲ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಟೋಲ್‌ ವಿರೋಧಿ ಸಮಿತಿ ನೀಡಿದ್ದ ಬಂದ್‌ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಕಾರ್ಕಳ-ಪಡುಬಿದ್ರೆ ಹೆದ್ದಾರಿಯಲ್ಲಿ ಮಧ್ಯಾಹ್ನದವರೆಗೆ ಯಾವುದೇ ವಾಹನ ಸಂಚರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next