Advertisement

ಬೆಳ್ಮಣ್‌ ಜಂತ್ರ: ಕಲ್ಲುಕೋರೆಯಲ್ಲಿ ತ್ಯಾಜ್ಯರಾಶಿ

10:37 PM Oct 11, 2019 | Sriram |

ಬೆಳ್ಮಣ್‌: ಬೆಳ್ಮಣ್‌ನಿಂದ ಶಿರ್ವಕ್ಕೆ ಸಾಗುವ ದಾರಿ ಮಧ್ಯೆ ಜಂತ್ರ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಅನತಿ ದೂರದಲ್ಲಿರುವ ಕಲ್ಲು ಕೋರೆಯಲ್ಲಿ ಪ್ರತಿದಿನ ಭಾರೀ ಪ್ರಮಾಣದ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು ಇಲ್ಲಿನ ಸ್ಥಳಿಯ ನಿವಾಸಿಗಳು ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರೂ ಸ್ಥಳಿಯಾಡಳಿತ ಮಾತ್ರ ಇದುವರೆಗೂ ಸ್ಪಂದಿಸಿಲ್ಲ ಎಂಬುದು ಅಲ್ಲಿಯ ನಾಗರಿಕರ ಆರೋಪ.

Advertisement

ಪ್ಲಾಸ್ಟಿಕ್‌ ತ್ಯಾಜ್ಯಗಳ ಜತೆ ಇತರ ಹಸಿ ಕಸವನ್ನು ತಂದು ಇಲ್ಲಿ ಸುರಿದು ಹೋಗುವುದರಿಂದ ಪರಿಸರ ತ್ಯಾಜ್ಯದಿಂದ ನಾರುತ್ತಿದೆ. ಈ ಕಲ್ಲುಕೋರೆ ನಿರುಪಯುಕ್ತವಾಗಿದ್ದು ಯಾವುದೇ ತಡೆಬೇಲಿ ಇಲ್ಲದೆ ಅಪಾಯ ಕಾರಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ತ್ಯಾಜ್ಯ ಕೊಳೆತು ಈ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿದೆ.

ಪಂಚಾಯತ್‌ ಸಭೆಯಲ್ಲೂ ಪ್ರಸ್ತಾವ
ಪಂಚಾಯತ್‌ ಸದಸ್ಯರೊಬ್ಬರು ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ
ಸಮಸ್ಯೆ ಬಗ್ಗೆ ಪ್ರಸ್ತಾವ ಮಾಡಿದ್ದರೂ ಯಾವುದೇ ಕ್ರಮವನ್ನು ಸ್ಥಳಿಯಾಡಳಿತ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಈ ಬಗ್ಗೆ ಸ್ಥಳಿಯಾಡಳಿತ ಕೂಡಲೇ ಸ್ಪಂದಿಸಿ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.

ಕಠಿನ ಕ್ರಮ ಕೈಗೊಳ್ಳಿ
ಈ ಬಗ್ಗೆ ಪಂಚಾಯತ್‌ಗೆ ದೂರು ನೀಡಲಾಗಿದ್ದು ಪಂಚಾಯತ್‌ ಈವರೆಗೂ ಸ್ಪಂದಿಸಿಲ್ಲ.ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತಂದು ಕಲ್ಲು ಕೋರೆಗೆ ತಂದು ಹಾಕುತ್ತಾರೆ . ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಬೇಕಾಗಿದೆ.
– ಯಮುನಾ,
ಸ್ಥಳೀಯರು

ಕ್ರಮ ಕೈಗೊಳ್ಳಲಾಗುವುದು
ಕಲ್ಲುಕೋರೆಯಲ್ಲಿ ತ್ಯಾಜ್ಯ ಎಸೆಯುವುದರ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. ಪಂಚಾಯತ್‌ನ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
-ಮಲ್ಲಿಕಾ ರಾವ್‌, ಮಾಜಿ ಗ್ರಾ.ಪಂ. ಅಧ್ಯಕ್ಷೆ, ಬೆಳ್ಮಣ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next