Advertisement
ಸಂಕಲಕರಿಯದ ಸುಧಾಕರ ಸಾಲ್ಯಾನ್ ಅವರ ಗದ್ದೆಯಲ್ಲಿ ಮಹಿಳೆಯರು 4 ಎಕರೆಗೆ ಬೇಕಾಗುವಷ್ಟು ನೇಜಿ ಕಿತ್ತು ಬಳಿಕ ಸಂಜೆಯೊಳಗೆ ನಾಟಿ ಮುಗಿಸಿದ್ದಾರೆ.
ಗಂಗಾವತಿಯಲ್ಲಿ ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇದ್ದು, ಆದ್ದರಿಂದ ಕೆಲಸ ಹುಡುಕಿಕೊಂಡು ಅವರು ಕರಾವಳಿಗೆ ಬಂದಿದ್ದಾರೆ. ಊರಿನಲ್ಲಿ ಸಿಗುವ 120 ರೂ. ಸಂಬಳ ಏನೇನೂ ಸಾಲದು. ಆದ್ದರಿಂದ ಇಲ್ಲೇ ಕೆಲಸ ಕಂಡುಕೊಂಡಿದ್ದಾರೆ. ಇವರು ಬೆಳಗ್ಗೆ 8 ಗಂಟೆಗೆ ನಾಟಿ ಕೆಲಸ ಆರಂಭಿಸಿದರೆ, ಮುಗಿಯುವ ವರೆಗೂ ವಿರಮಿಸುವುದಿಲ್ಲ. ಆಹಾರದ ವ್ಯವಸ್ಥೆಯನ್ನು ಇವರೇ ನಿಭಾಯಿಸುತ್ತಾರೆ. ತಂಡದಲ್ಲಿ ಕೆಲ ಮಂದಿ ಪುರುಷರೂ ಇದ್ದು ಭಾರೀ ಚುರುಕಿನಲ್ಲಿ ದುಡಿಯುತ್ತಾರೆ.