Advertisement
ಕಣ್ಣುಮುಚ್ಚಾಲೆಬಿಎಸ್ಎನ್ಎಲ್ ಸಮಸ್ಯೆ ಬಗ್ಗೆ ಇಲಾಖೆಗೂ ದೂರು ಕೊಡುವಂತಿಲ್ಲ. ಕಾರಣ ಇಲಾಖೆಯ ದೂರವಾಣಿಗಳೇ ಸ್ತಬ್ಧವಾಗಿದ್ದು ಗ್ರಾಹಕರು ದಿಕ್ಕೇ ತೋಚದಂತಾಗಿದ್ದಾರೆ. ಇಂಟರ್ನೆಟ್ ಕೂಡ ಇಲ್ಲವಾದ್ದರಿಂದ ಹಾಗೂ ದೂರು ಕೊಡುವುದು ಸಾಧ್ಯವಾಗಿಲ್ಲ.
ಬೆಳ್ಮಣ್ ಟವರ್ ವಿದ್ಯುತ್ ಇಲ್ಲದಾಗ ನಿಷ್ಕ್ರಿಯವಾಗುತ್ತಿದೆ. ಪರ್ಯಾಯವಾಗಿ ಜನರೇಟರ್ ಇದ್ದರೂ ಡೀಸೆಲ್ ಹಾಕಲು ಇಲಾಖೆ ಹಣ ನೀಡದ್ದರಿಂದ ಸಂಪರ್ಕ ಕಡಿಯುತ್ತಿದೆ. ಟವರ್ ಸಮಸ್ಯೆಯ ಬಗ್ಗೆ ನೂರಾರು ದೂರುಗಳು ದಿನಂಪ್ರತಿ ಬರುತ್ತಿದ್ದರೂ ಉತ್ತರಿಸಬೇಕಾದವರು ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಈ ಹಿಂದೆ ಬಿಎಸ್‌ಎನ್‌ಎಲ್ ಮೊಬೈಲ್ ಸೇವೆ ಆರಂಭಿಸಿದಾಗ ಬಹಳ ಆಸಕ್ತಿಯಿಂದ ಸಿಮ್ ಖರೀದಿಸಿದ್ದ ಗ್ರಾಹಕರು ಇಲಾಖೆಯ ಈಗಿನ ಮುಗಿಯದ ಸಮಸ್ಯೆಗಳಿಂದಾಗಿ ನಿಧಾನವಾಗಿ ಸಿಮ್ ಬದಲಿಸತೊಡಗಿದ್ದಾರೆ. ನೂರಾರು ಸ್ಥಿರ ದೂರವಾಣಿಗಳು ಸಂಪರ್ಕ ಕಡಿದುಕೊಂಡಿವೆ.
Related Articles
ಟವರ್ ಸ್ತಬ್ಧವಾಗಿದ್ದು ಗ್ರಾಹಕರಿಗೆ ಭಾರೀ ಉಂಟಾಗಿದೆ. ದೂರು ನೀಡಿದರೂ ಯಾವುದೇ ಅಧಿಕಾರಿ ಸ್ಪಂದಿಸುತ್ತಿಲ್ಲ.
-ಸುರೇಶ್ ರಾವ್,ಬೆಳ್ಮಣ್
Advertisement
ಕೂಡಲೇ ಕ್ರಮಬೆಳ್ಮಣ್ ಸುತ್ತಮುತ್ತ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲಾಗಿದೆ. ಇನ್ನೂ ತೊಂದರೆಗಳಿವೆ ಎಂಬ ದೂರುಗಳು ಬರುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ರವಿ, ಜನರಲ್ ಮ್ಯಾನೇಜರ್,
ಬಿಎಸ್‌ಎನ್‌ಎಲ್, ಉಡುಪಿ