Advertisement
ಈ ಸಂದರ್ಭದಲ್ಲಿ ಮಾರ್ಗದರ್ಶಿ ಅಧಿಕಾರಿ ತುಳಸಿ ಅವರು ಮಾತನಾಡಿ, ಜಲ ಜೀವ ಮಿಷನ್‌ನ ಮೂಲ ಉದ್ದೇಶವನ್ನು ಎಲ್ಲರೂ ಅರಿಯಬೇಕಾದ ಅಗತ್ಯ ಇದೆ. ನಮಗೆ ಈ ಭೂಮಿಯ ಮೇಲೆ ಜೀವಿಸಲು ಮುಖ್ಯವಾಗಿ ಗಾಳಿ, ನೀರು, ಬೆಳಕು ಮುಂದಿನ ಜನಾಂಗಕ್ಕೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಿಂದ ಪ್ರಕೃತಿಯ ವಿರುದ್ಧ ಸೆಣಸಾಟ ಬಿಟ್ಟು , ಪ್ರಕೃತಿಯೊಂದಿಗೆ ಬೆರೆತು ಬಾಳಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಅರಣ್ಯ ಇಲಾಖಾ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ವಿತರಿಸುತ್ತಿದ್ದೇವೆ ಎಂದರು.
ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಜಲ ಜೀವ ಮಿಷನ್ ಕ್ರಿಯಾ ಯೋಜನೆ ತಯಾರಿ ಬಗ್ಗೆ ನಡೆದ ವಿಶೇಷ ಗ್ರಾಮ ಸಭೆಗೆ ಆಗಮಿಸಿದ ಗ್ರಾಮಸ್ಥರು ನಿಯಮಾನುಸಾರವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಿಂದ ಗ್ರಾಮಸ್ಥರು ಆಸೀನರಾಗಲು ಇರಿಸಿದ ಸುಮಾರು 50 ಕುರ್ಚಿಗಳನ್ನು ಸುಮಾರು ಒಂದು ಮೀಟರ್ ಅಂತರದಲ್ಲಿ ಇರಿಸಿರುವುದು ಕಂಡು ಬಂತು.
Related Articles
ಜಲ ಜೀವ ಮಿಷನ್ ಅಡಿಯಲ್ಲಿ ಬೇಳೂರು ಗ್ರಾ. ಪಂ.ವ್ಯಾಪ್ತಿಯ ಭೌಗೋಳಿಕವಾಗಿ ಅಧ್ಯಯನ ನಡೆಸಿ, ಜನಸಂಖ್ಯೆಯ ಆಧಾರದ ಮೇಲೆ ಮುಂದಿನ 30 ವರ್ಷಗಳ ದೂರದೃಷ್ಟಿತ್ವದ ಆಧಾರದ ಮೇಲೆ ಈಗಾಗಲೇ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸುಮಾರು ರೂ. 2ಕೋಟಿ 45 ಲಕ್ಷದ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ನೀರಿನ ಸಂಪರ್ಕ ಹೊಂದಲೇ ಬೇಕು ಜತೆಗೆ ಗ್ರಾಮದಲ್ಲಿನ ಮದಗ, ಕೆರೆಗಳ ಹೂಳೆತ್ತುವುದು ಹಾಗೂ ಬಾವಿ ನಿರ್ಮಾಣಗಳು ಈ ಯೋಜನೆಗೆ ಒಳಪಟ್ಟಿದೆ.
-ಬಿ.ಕರುಣಾಕರ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ.ಬೇಳೂರು
Advertisement