Advertisement

“ಬೆಳ್ಳಿ ಅಂಚು’ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ ಸಿಂಗಾಪುರ

05:29 PM Mar 08, 2021 | Team Udayavani |

ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ ಆಚರಣೆಯ ಮೊದಲ ಕಾರ್ಯಕ್ರಮ ಬೆಳ್ಳಿ ಅಂಚು ವರ್ಚುವಲ್‌ ಕಾರ್ಯಕ್ರಮ ಫೆ. 20ರಂದು ನಡೆಯಿತು.

Advertisement

ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಅಧ್ಯಕ್ಷ ರಶ್ಮೀ ಉದಯ ಕುಮಾರ್‌, 1996ರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ಥಾಪನೆಯಾದ ಸಿಂಗಾಪುರ ಕನ್ನಡ ಸಂಘವು 25 ವರ್ಷಗಳ ಕಲಾವಧಿಯ ಮೈಲುಗಲ್ಲನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಆಚರಣೆ ಮಾಡಲಾಗುವುದು. ಇದರ ಮೊದಲನೇ ಕಾರ್ಯಕ್ರಮವೇ “ಬೆಳ್ಳಿ ಅಂಚು’ ಸಿಂಗಾರಕ್ಕೊಂದು ಹೊಸ ಮೆರುಗು ಎಂದರು.

ಸಿಂಗಾಪುರಕ್ಕೆ ವಲಸೆ ಅಥವಾ ತಾತ್ಕಾಲಿಕವಾಗಿ ಬರುವ ಎಲ್ಲ ಕನ್ನಡಿಗರಿಗೆ ತಾಯ್ನಾಡಿನ ಆಗುಹೋಗುಗಳನ್ನು ಸಮಾನ ಅಭಿರುಚಿ, ಅನುಭವಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ವೇದಿಕೆ ಯಾಗಿ, ಸಿಂಗಾ ಪುರ ಕನ್ನ ಡಿ ಗ ರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯವನ್ನು ಅಭಿವ್ಯಕ್ತಿ ಗೊಳಿಸಲು ಅನುಕೂಲ, ಅವಕಾಶ ಮಾಡಿಕೊಡುವಂಥ ಒಂದು ಪೋಷಕ ಸಂಸ್ಥೆಯಾಗಿ ಕನ್ನಡ ಸಂಘ ಬೆಳೆದಿದೆ. ಸಿಂಗಾಪುರದಲ್ಲಿ ಕನ್ನಡ ಮಾತನಾಡುವ ಜನರಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ, ಕ್ಷೇಮಾ ಭ್ಯುದಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಜಗತ್ತಿನ ವಿವಿಧೆಡೆಯ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವುದು ಸಂಘದ ಮೂಲಭೂತ ಉದ್ದೇಶಗಳಾಗಿವೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಅನೇಕ ಸಂಸ್ಥಾಪಕರು ಮತ್ತು ಮುಖ್ಯಸ್ಥರು ಈ ಸಂಘಕ್ಕೆ ಪ್ರಬಲವಾದ ಅಡಿಪಾಯ ಹಾಕಿ¨ªಾರೆ. ಅವರ ಅತ್ಯುತ್ತಮ ನಾಯಕತ್ವ, ಅಮೂಲ್ಯವಾದ ಸೇವೆ ಮತ್ತು ಮೌಲ್ಯಯುತ ಕೊಡುಗೆಗಳು ಶ್ಲಾಘನೀಯ. ಅವರ ಮಾರ್ಗದರ್ಶನದಲ್ಲಿ ಸಂಘದ ಉದಯೋನ್ಮುಖ ಬೆಳವಣಿಗೆಯನ್ನು ನೋಡಿದ್ದೇವೆ ಎಂದ ಅವರು, 2020 ವರ್ಷದ ಕಹಿಯಳಿದು, 2021 ಎಲ್ಲರಿಗೂ ಒಳಿತನ್ನುಂಟು ಮಾಡಲಿ. ಜಗತ್ತಿಗೆ ಆವರಿಸಿರುವ ಕೊರೊನಾ ಕಂಟಕ ಕಳೆಯಲಿ, ಮುಂಬರುವ ದಿನಗಳು ಆನಂದದಾಯಕವಾಗಿರಲಿ, ಆರೋಗ್ಯ, ಸಂತೋಷ, ನೆಮ್ಮದಿ, ಅಭಿವೃದ್ಧಿ ನಿಮ್ಮದಾಗಲಿ ಎಂದು ಕಾರ್ಯಕಾರಿ ಸಮಿತಿಯ ಪರವಾಗಿ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಿಂಗಾಪುರ ಕನ್ನಡ ಸಂಘಕ್ಕೆ ಶುಭ ಹಾರೈಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌. ನಾಗಾಭರಣ ಅವರಿಗೆ ರಶ್ಮೀ ಅಭಿನಂದನೆ ಸಲ್ಲಿಸಿದರು.

ವಿಶೇಷ ಸಂಚಿಕೆ, ನೂತನ ಜಾಲತಾಣ ಸಂಘದ ರಜತ ಮಹೋತ್ಸವ ಸಂದರ್ಭದಲ್ಲಿ ಸಿಂಗಾರ ಪತ್ರಿಕೆ ವಿಶೇಷ ಸಂಚಿಕೆ ಪ್ರಕಟಗೊಂಡಿದ್ದು, ಇದನ್ನು ಸಂಪೂರ್ಣ ಮಹಿಳಾ ತಂಡ ಸಂಪಾದಿಸಿದೆ. ಇದರ ಪ್ರಧಾನ ಸಂಪಾದಕರಾಗಿ ಮಾಲಾ ನಾಗರಾಜ್‌, ವಿದ್ಯಾ ವೆಂಕಟೇಶ್‌, ಸಹ ಸಂಪಾದಕರಾಗಿ ಕವಿತಾ ರಾಘವೇಂದ್ರ, ಯಶಸ್ವಿನಿ ಮುರಳಿ, ಕಾರ್ಯಕಾರಿ ಸಮಿತಿ ಸದಸ್ಯರು ಇ- ಪತ್ರಿಕೆಯನ್ನು ಯಶಸ್ವಿಯಾಗಿ ಹೊರತರಲು ನೀಡಿರುವ ಕೊಡುಗೆಗಾಗಿ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಇ- ಸಿಂಗಾರ ಪತ್ರಿಕೆಯ ಪ್ರಧಾನ ಸಂಪಾದಕಿ ಮಾಲಾ ನಾಗರಾಜ್‌ ಅವರು ಪತ್ರಿ ಕೆಯ ಕುರಿತು ಮಾಹಿತಿ ನೀಡಿದರು.
ಸಂಘದ ವೆಬ್‌ಸೈಟ್‌ ಸರಳೀಕರಿಸಬೇಕು ಎನ್ನುವ ಉದ್ದೇಶದ ಪರಿಣಾಮ ವೆಬ್‌ಸೈಟ್‌ನ ಹೊಸ ರೂಪ ಸಿದ್ಧವಾಗಿದ್ದು, ಇದು ಸುಮಾರು 6 ತಿಂಗಳ ಕಠಿನ ಪರಿಶ್ರಮ ಮತ್ತು ಬದ್ಧತೆಯ ಫ‌ಲಿತಾಂಶವಾಗಿದೆ ಎಂದು ಸಂಘದ ಕಾರ್ಯದರ್ಶಿ ಪವನ್‌ ಜೋಶಿ ಅವರು ನೂತನ ಜಾಲತಾಣದ ಕುರಿತು ವಿವರಿಸಿದರು.

Advertisement

ಇದೇ ಸಂದರ್ಭದಲ್ಲಿ ನೂತನ ಜಾಲತಾಣದ ಲೋಕಾರ್ಪಣೆಯೂ ನಡೆಯಿತು. ನೂತನ ವೆಬ್‌ಸೈಟ್‌ ಅನಾವರಣದಲ್ಲಿ ಅವರ ಶ್ರಮ ಮತ್ತು ಮುಂದಾಳುತನಕ್ಕೆ ಕಾರ್ಯಕಾರಿ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸತ್ವ ಪರೀಕ್ಷೆ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರಸಂಗ ಕವಿ ಹಳೆಮಕ್ಕಿ ರಾಮ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶಂಕರ ಭಾಗವತ ಮತ್ತು ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಉದಯ ಕಡಬಾಳ, ಕಾರ್ತಿಕ್‌ ಚಿಟ್ಟಾಣಿ, ಶ್ರೀಧರ ಭಟ್ಟ ಕಾಸರಕೋಡು, ಸದಾಶಿವ ಮಲವಳ್ಳಿ, ವಿನಯ ಬೇರೂಳ್ಳಿ ಅವರು ಪ್ರದರ್ಶನದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿ ಹಿಡಿಯುವಂತೆ ಮಾಡಿದ್ದು ಸಿಂಗಾ ಪುರ ಕನ್ನ ಡಿ ಗರ ಮನ ಸಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next