ಎಚ್.ಡಿ.ಕೋಟೆ: ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ತಾಲೂಕಿನ ಪ್ರಸಿದ್ಧ ಬೇಲದ ಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆ ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಜರುಗಿತು. ಶಾಸಕ ಅನಿಲ್ ಚಿಕ್ಕಮಾದು ಉಪಸ್ಥಿತಿಯಲ್ಲಿ ಬೆರಳೆಣಿಕೆ ಯಷ್ಟು ಮಂದಿ ದೇವಸ್ಥಾನ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಅಚರಿಸಲಾಯಿತು. ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಯಡಿಯಾಲ ವನ್ಯಜೀವಿ ಸಂರಕ್ಷಿತ ಪ್ರದೇಶದ ಅರಣ್ಯದೊಳಗಿರುವಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ತಾಲೂ ಕಿನಲ್ಲಿಯೇ ಹೆಸರುವಾಸಿ ಯಾಗಿದೆ. ಪ್ರತಿ ವರ್ಷ 3-4 ದಿನಗಳ ಕಾಲ ದೇವರಿಗೆ ಅಭಿಷೇಕ, ಹೋಮ, ಹಾಲರವಿ ಸೇವೆ, ಕೊಂಡೋತ್ಸವ, ರಾಸುಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಜಾತ್ರೆಗೆ ತಾಲೂಕಿನ ಭಕ್ತರಷ್ಟೇ ಅಲ್ಲದೆ ನೆರೆಹೊರೆಯ ತಾಲೂಕು, ಜಿಲ್ಲೆಗಳಿಂದ ಸಹಸ್ರಾರು ಮಂದಿ ಆಗಮಿಸುತ್ತಿದ್ದರು.
ಆದರೆ, ಈ ವರ್ಷ ಕೋವಿಡ್ ಭೀತಿ ಕಾರಣ ಸರ್ಕಾರದ ಆದೇಶದಂತೆ ಬೇಲದಕುಪ್ಪೆ ಜಾತ್ರೆಗೆ ಭಕ್ತರುಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಕಳೆದ 2 ದಿನಗಳ ಹಿಂದಿನಿಂದ ಸ್ಥಳ ದಲ್ಲಿಯೇಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿ ಅರಣ್ಯ ಇಲಾಖೆ ಮುಖ್ಯ ದ್ವಾರದ ಚೈನ್‌ಗೇಟ್ ಬಳಿಯಲ್ಲಿಯೇ ಪ್ರವೇಶ ನಿರ್ಬಂಧ ವಿಧಿಸಿದ್ದರು. ವಿಷಯ ತಿಳಿಯದೇಜಾತ್ರೆಗೆಂದುಆಗಮಿಸಿದ್ದಭಕ್ತಾದಿಗಳು ಅನ್ಯ ಮಾರ್ಗ ಕಾಣದೆ ನಿರಾಸೆಯಿಂದ ನಿರ್ಗಮಿಸಿದರು. ಈ ದಿನ ಅರಣ್ಯ ಇಲಾಖೆ ವಾಹನದಲ್ಲಿ ದೇವಸ್ಥಾನ ಸಮಿತಿಯ ಸುಮಾರು 40ರಿಂದ 50 ಮಂದಿ ಸದಸ್ಯರಿಗಷ್ಟೇ ಪ್ರವೇಶನೀಡಲಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಭಕ್ತರು ಶಾಸಕ ಸಿ.ಅನಿಲ್ ಚಿಕ್ಕಮಾದು ಉಪಸ್ಥಿತಿಯಲ್ಲಿ ಕೊಂಡೋತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಪ್ರತಿವರ್ಷ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಆಚರಣೆ ಕಾಣುತ್ತಿದ್ದ ಮಹದೇಶ್ವರ ಸ್ವಾಮಿ ಜಾತ್ರೆಯು ಈ ಬಾರಿ ಭಕ್ತರಿಲ್ಲದೇ ಸಂಭ್ರಮ ಕಳೆದುಕೊಂಡಿತ್ತು. ಈ ವೇಳೆಯಡಿಯಾಲ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಕುಮಾರ್,ವಲಯಅರಣ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಇಲಾಖೆ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ವರ್ಷಕಕೊಮ್ಮೆ ಮಾತ್ರ ಭಕ್ತರಿಗೆ ದೇಗುಲ ಪ್ರವೇಶ : ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಜಾಗವನ್ನುಕಳೆದ2-3 ವರ್ಷಗಳ ಹಿಂದೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸುತ್ತಿದ್ದಂತೆಯೇ ದೇವರ ದರ್ಶನಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಇದರಿಂದಕುಪಿತರಾದ ವಿವಿಧ ಗ್ರಾಮಗಳ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡುವೆ ವೈಷಮ್ಯ ಭುಗಿ ಲೆದಿತ್ತು.ಆಗ ಅರಣ್ಯ ಇಲಾಖೆಯಲ್ಲಿರಿಸಿದ್ದ ಮರಗಳಿಗೆ ಬೆಂಕಿ ಇಟ್ಟು ಭಾರೀ ವಿವಾದ ಸೃಷ್ಟಿಸಲಾಗಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಂತಿ ಸಭೆ ನಡೆಸಿ ವರ್ಷದ ಜಾತ್ರೆ ಸಂದರ್ಭದಲ್ಲಿ ಮಾತ್ರ ಪ್ರವೇಶ ನೀಡಲು ಮೌಖೀಕವಾಗಿ ಅನುಮತಿ ನೀಡಲಾಗಿತ್ತು. ಅದರಂತೆಕಳೆದ ವರ್ಷ ಜಾತ್ರೆ ನಡೆದಿತ್ತು. ಸಾಮಾನ್ಯ ದಿನಗಳಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ದೇಗುಲದ ಸನ್ನಿಧಿಯಲ್ಲೇ ಮೂವರು ಅರ್ಚಕರಕುಟುಂಬಗಳಿಗೆ ನೆಲೆಸಿದ್ದು, ಇವರು ಮಾತ್ರ ದೇಗುಲದಲ್ಲಿ ಪೂಜಾಕೈಂಕರ್ಯ ನಡೆಸುವರು.
-ಎಚ್.ಬಿ.ಬಸವರಾಜು