Advertisement

ನ್ಯಾಯ ಬೆಲೆಯಲ್ಲಿ ಮಾಸ್ಕ್ ಸಿಗಲಿ

01:40 PM Mar 21, 2020 | Naveen |

ಬಳ್ಳಾರಿ: ಮಾಸ್ಕ್ ಮತ್ತು ಸ್ಯಾನಿಟೈಜರ್ಸ್‌ಗಳನ್ನು ಅಗತ್ಯ ವಸ್ತುಗಳೆಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಜೊತೆಗೆ ಸಾರ್ವಜನಿಕರಿಗೆ ಅತ್ಯಂತ ಅವಶ್ಯಕವಿರುವ ಕೈ ಸ್ವಚ್ಛತಾಕಾರಕಗಳು, ಸೋಪು, ಡಿಟರ್‌ಜೆಂಟ್‌ ಹಾಗೂ ನೆಲ ಸ್ವತ್ಛತಾಕಾರಕಗಳ ಲಭ್ಯತೆ, ಸರಬರಾಜು, ದಾಸ್ತಾನು ಮತ್ತು ಬೆಲೆ ಮುಂತಾದ ವಿಷಯಗಳ ಬಗ್ಗೆ ಜಿಲ್ಲಾಮಟ್ಟದ ಪರಿಶೀಲನಾ ತಂಡವು ನಗರದ ವಿವಿಧೆಡೆ ಶುಕ್ರವಾರ ದಾಳಿ ನಡೆಸಿ ಪರಿಶೀಲನೆ ನಡೆಸಿತು.

Advertisement

ಬಳ್ಳಾರಿ ಮೋರ್‌, ಸೆವೆನ್‌ ಹಿಲ್ಸ್‌-  ಸತ್ಯನಾರಾಯಣ ಪೇಟೆ, ಫುಡ್‌ ಮತ್ತು ನೀಡ್ಸ್‌-ಗಾಂಧಿನಗರ, ತನ್ಮಯ್‌ ಸೂಪರ್‌ ಮಾರ್ಕೆಟ್‌- ಪಾರ್ವತಿ ನಗರ, ರಾಜ್‌ ಸೂಪರ್‌ ಮಾರ್ಕೆಟ್‌-ಕ್ಲಬ್‌ ರಸ್ತೆ, ಪತಂಜಲಿ ಸ್ಟೋರ್ಸ್‌, ಸೆವೆನ್‌ ಹಿಲ್ಸ್‌-ಇನೆಂಟ್ರಿ ರಸ್ತೆ, ಅಮ್ಮ ಸೂಪರ್‌ ಬಜಾರ್‌-ಸುಧಾ ಕ್ರಾಸ್‌ ಸೇರಿದಂತೆ ಇನ್ನಿತರ ಸೂಪರ್‌ ಮಾರ್ಕೆಟ್ಸ್‌ಗಳಿಗೆ ಭೇಟಿ ನೀಡಿ ಈ ನಿತ್ಯೋಪಯೋಗಿ ವಸ್ತುಗಳ ದಾಸ್ತಾನು, ಬೇಡಿಕೆ ಮತ್ತು ಪೂರೈಕೆ ಬಗ್ಗೆ ತಂಡ ಪರಿಶೀಲಿಸಿತು. ಈ ಎಲ್ಲ ಪ್ರಮುಖ ಸೂಪರ್‌ ಮಾರ್ಕೆಟ್ಸ್‌ ಗಳಲ್ಲಿ ಕೈ ಸ್ವತ್ಛತಾಕಾರಕಗಳು, ಸೋಪು, ಡಿಟರ್‌ಜೆಂಟ್ಸ್‌ ಪೇಪರ್‌ ನಾಪಿRನ್ಸ್‌, ನೆಲ ಮತ್ತು ಶೌಚಾಲಯ ಸ್ವತ್ಛತಾಕಾರಕಗಳ ಅಪಾರ ದಾಸ್ತಾನಿರುತ್ತವೆ. ಇವುಗಳ ಬೆಲೆಗಳು ಸಹ ಸ್ಥಿರವಾಗಿವೆ. ಅದರಂತೆ ಕೈ ನಿರ್ಮಲಿಕಾರಕ ಮತ್ತು ಮುಖ ಗವುಸುಗಳನ್ನು ಸಹ ತರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡುವುದಾಗಿ ಈ ಮಾರಾಟಗಾರರು ತಿಳಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ| ಕೆ. ರಾಮೇಶ್ವರಪ್ಪ ಅವರು ತಿಳಿಸಿದರು. ಎಲ್ಲ ಮೆಡಿಕಲ್‌ ಮಳಿಗೆಗಳು ಮತ್ತು ಸೂಪರ್‌ ಮಾರ್ಕೆಟ್‌ಗಳು ಮುಖ ಗವುಸು ಮತ್ತು ಕೈ ನಿರ್ಮಲಿಕಾರಕಗಳು, ಮತ್ತಿತರೆ ನಿತ್ಯೋಪಯೋಗಿ ಸ್ವಚ್ಚಕಾರಕಗಳನ್ನು ನಿರಂತರವಾಗಿ ನ್ಯಾಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಶರಣಬಸವಯ್ಯ, ನಾರಾಯಣಪ್ಪ, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕರಾದ ಶಶಿಕಾಂತ್‌, ಔಷಧ ನಿಯಂತ್ರಣ ಇಲಾಖೆ ಸಹಾಯಕ ನಿಯಂತ್ರಕರುಗಳಾದ ಸುಜಿತ್‌ ಮತ್ತು ಶಾಮಲಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next