Advertisement

ಬಳ್ಳಾರಿಯಲ್ಲಿ ವಿನಾಕಾರಣ ಓಡಾಡಿದ 800 ದ್ವಿಚಕ್ರ ವಾಹನಗಳು, 50 ಆಟೋ ವಶಕ್ಕೆ: ಎಸ್ ಪಿ ಮಾಹಿತಿ

01:21 PM Apr 09, 2020 | keerthan |

ಬಳ್ಳಾರಿ: ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯಾದ್ಯಾಂತ ಲಾಕ್ ಡೌನ್ ವಿಧಿಸಲಾಗಿದೆ‌. ಜನರು ಸಹಕಾರ ನೀಡುತ್ತಿದ್ದಾರೆ. ತುರ್ತು ಸೇವೆ ಹೊರತು ಪಡಿಸಿ ಜನರು ಕೆಲವರು ಹೊರಗಡೆ ಓಡಾಡುತ್ತಿದ್ದಾರೆ.ಇದುವರೆಗೆ 800 ದ್ವಿಚಕ್ರ ವಾಹನ, 50 ಆಟೋ ಸೇರಿದಂತೆ ನಾನಾ ವಾಹನ ಗಳು ವಶಕ್ಕೆ ಪಡೆದಿದ್ದೇವೆ. ಲಾಕ್ ಡೌನ್ ಉಲ್ಲಂಘನೆ ಮಾಡಿದ 20 ಜನರ ಮೇಲೆ ಕೇಸ್ ಹಾಕಿದ್ದೇವೆ ಎಂದು  ಎಸ್ ಪಿ ಸಿ.ಕೆ.ಬಾಬಾ ಹೇಳಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರು ಪಾಸಿಟಿವ್ ಪ್ರಕರಣವಿದೆ. ಹೊಸಪೇಟೆ, ಸಿರಿಗೇರಿಯ ಹೊಸಳ್ಳಿ, ಬಳ್ಳಾರಿಯ ಗುಗ್ಗರಹಟ್ಟಿ ಕಂಟೈನ್ಮೆಂಟ್ ಝೋನ್ ಇದೆ. ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ಉತ್ತಮ ಕೆಲಸ ಮಾಡುತ್ತಿದೆ.ಜನರು ವಿನಾ ಕಾರಣ ಹೊರ ಬರುತ್ತಿಲ್ಲಾ. ನಾವೂ ಕೂಡ ಜಾಗೃತಿ ಮೂಡಿಸುತ್ತಿದ್ದೇವೆ. ಗಡಿ ಭಾಗದಲ್ಲಿ ಆರು ಚೆಕ್ ಪೋಸ್ಟ್  ಇವೆ. ಮತ್ತಷ್ಟು ಬಿಗಿಯಾಗಿ ಕೆಲಸ ಮಾಡಲು ಸೂಚಿಸಿದ್ದೇವೆ. ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದರು.

ತಬ್ಲಿಘಿ ಜಮಾತ್ ಗೆ ಹೋಗಿ ಬಂದ 66 ಜನ ಹೋಮ್ ಕ್ವಾರೆಂಟೆನ್ ನಲ್ಲಿದ್ದಾರೆ. ಇನ್ನಷ್ಟು ಜನ ಬೇರೆ ರಾಜ್ಯದಲ್ಲಿ ಇದ್ದಾರೆ. ಆಯಾ ರಾಜ್ಯಗಳಿಗೆ ಮಾಹಿತಿ ಕೂಡ ಕೊಡಲಾಗಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಬಿಎಸ್ಎಫ್ ನ ಒಬ್ಬ ಸಿಬ್ಬಂದಿಯನ್ನು ಹೋಮ್ ಕ್ವಾರೆಂಟೆನ್ ಮಾಡಲಾಗಿದೆ. ಅವರ ಸಂಬಂಧಿಕರು ಅವರನ್ನು ಭೇಟಿಯಾಗಿ ಬಂದಿದ್ದಾರೆ. ಭೇಟಿಯಾಗೋದು ಸರಿಯಲ್ಲ ಅಂತ ಹೇಳಲಾಗಿದೆ. ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ವಸ್ತುಗಳನ್ನು ನಾವು ಪೂರೈಸಿದ್ದೇವೆ  ಎಂದು ಮಾಹಿತಿ ನೀಡಿದರು.

ಧಾರ್ಮಿಕ ಕೇಂದ್ರಗಳನ್ನು ಸಹ ಬಂದ್ ಮಾಡಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕೇಸ್ ಮಾಡಲಾಗಿದೆ. ನಾನಾ ಧಾರ್ಮಿಕ ಕಾರ್ಯಕ್ರಮಗಳಿವೆ, ಆಯಾ ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಯಲ್ಲೇ ಇದ್ದು, ಆಚರಿಸಿ. ಹೊರಗಡೆ ಬಂದು ಗುಂಪುಗೂಡುವುದು ಬೇಡ ಎಂದು ಎಸ್ ಪಿ ಸಿ ಕೆ.ಬಾಬಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next