Advertisement

ಡಿಫ್ತೀರಿಯಾ ನಿವಾರಣೆಗೆ ತಪ್ಪದೇ ಲಸಿಕೆ ಹಾಕಿಸಿ

01:26 PM Dec 12, 2019 | Naveen |

ಬಳ್ಳಾರಿ: ಮಾರಣಾಂತಿಕವಾದ ಗಂಟಲುಮಾರಿ ರೋಗ ರಾಜ್ಯದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿದೆ. ಇದರ ನಿವಾರಣೆಗೆ 5ರಿಂದ 16 ವರ್ಷದ ಮಕ್ಕಳಿಗೆ ಡಿಪಿಟಿ ಹಾಗೂ ಟಿ.ಡಿ ಲಸಿಕೆಯನ್ನು ತಪ್ಪದೇ ಹಾಕಿಸಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ ಪಾಂಡೆ ಹೇಳಿದರು.

Advertisement

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಏರ್ಪಡಿಸಿದ್ದ ಶಾಲಾ ಲಸಿಕಾ ಅಭಿಯಾನದಡಿ ರಾಜ್ಯಮಟ್ಟದ ಡಿಪಿಟಿ/ಟಿಡಿ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮೊದಲ ಬಾರಿಗೆ ಈ ಲಸಿಕೆಯನ್ನು ಮಕ್ಕಳಿಗೆ ಹಾಕಿಸಲಾಗಿತ್ತಿದ್ದು, ಈ ಮಾರಣಾಂತಿಕವಾದ ಡಿಫ್ತೀರಿಯಾ (ಗಂಟಲುಮಾರಿ) ರೋಗವನ್ನು ತಡೆಗಟ್ಟಲು ತಪ್ಪದೆ ಮಕ್ಕಳಲ್ಲಿ ಲಸಿಕೆ ಹಾಕಬೇಕು. ಈ ಲಸಿಕೆಯನ್ನು ಹಾಕಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮಾತನಾಡಿ, ಈ ಲಸಿಕಾ ಅಭಿಯಾನವು ಇಂದಿನಿಂದ ಡಿ. 31ರವರೆಗೆ ಎಲ್ಲ ಮಕ್ಕಳಿಗೆ ಗಂಟಲು ಮಾರಿ ಲಸಿಕೆಯನ್ನು ಹಾಕಿಸಬೇಕು. 5ರಿಂದ 6 ವರ್ಷದ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಹಾಗೂ 15ರಿಂದ 16 ವರ್ಷದ ಮಕ್ಕಳಿಗೆ ಟಿ.ಡಿ ಲಸಿಕೆಯನ್ನು ತಪ್ಪದೇ ಹಾಕಿಸಬೇಕು ಎಂದರು.

ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ರಾಜ್ಯಮಟ್ಟದ ಈ ಲಸಿಕಾ ಅಭಿಯಾನದ ಕಾರ್ಯಕ್ರಮ ನಮ್ಮ ಬಳ್ಳಾರಿಯಲ್ಲಿ ಮಾಡಿರುವುದು ಸಂತೋಷದ ವಿಷಯ. ರಾಜ್ಯದಲ್ಲಿ 500ಕ್ಕೂ ಹೆಚ್ಚು ಶಂಕಿತ ಡಿಫ್ತೀರಿಯಾ ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣದಲ್ಲಿ ಶೇ. 70ರಷ್ಟು ಪ್ರಕರಣಗಳು 5 ರಿಂದ 16 ವರ್ಷ ವಯಸ್ಸಿನಲ್ಲಿ ಕಂಡುಬಂದಿವೆ. ಈ ಮಾರಣಾಂತಿಕ ರೋಗವು ಅತಿಯಾಗಿ 9 ಜಿಲ್ಲೆಗಳಾದ ಕೊಪ್ಪಳ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ರಾಯಚೂರು, ಬೀದರ್‌, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 370ಕ್ಕೂ ಹೆಚ್ಚು ಪ್ರಕರಣಗಳು ಕಂಡಿಬಂದಿವೆ. ಗಂಟಲುಮಾರಿ ರೋಗ ಮುಕ್ತ ಮಾಡಲು ಸಾಂಕೇತಿಕವಾಗಿ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.

Advertisement

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸರೆಡ್ಡಿ ಸ್ವಾಗತಿಸಿದರು. ಆರೋಗ್ಯ ಶಿಕ್ಷಣ ಅ ಧಿಕಾರಿ ಈಶ್ವರ ಎಚ್‌. ದಾಸಪ್ಪನವರ ಅವರು ವಂದಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ ಯೋಜನಾ ನಿರ್ದೇಶಕ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಧಿಕಾರಿ ಎಸ್‌.ಎಸ್‌.ನಕುಲ್‌, ಜಿಪಂ ಸಿಇಒ ನಿತೀಶ್‌.ಕೆ, ಬೆಂಗಳೂರಿನ ಎನ್‌.ಎಚ್‌.ಎಂ ಅಪರ ನಿರ್ದೇಶಕ ಡಾ| ಬಿ.ಎಸ್‌. ಪಾಟೀಲ್‌, ಡಡಬ್ಲ್ಯೂಎಚ್‌ಒ ಕರ್ನಾಟಕ ಉಪಕ್ಷೇತ್ರ ಅಧಿಕಾರಿ ಡಾ| ಲೋಕೇಶ್‌ ಅಲಹರಿ, ಬೆಂಗಳೂರಿನ ಲಸಿಕಾ ಕಾರ್ಯಕ್ರಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪನಿರ್ದೇಶಕಿ ಬಿ.ಎನ್‌.ರಜನಿ, ಡಿಎಚ್‌ಒ ಎಚ್‌.ಎಲ್‌. ಜನಾರ್ಧನ್‌, ಜಿಲ್ಲಾ ಆರ್‌.ಸಿ. ಎಚ್‌ ಅಧಿಕಾರಿ ಡಾ| ಅನಿಲ್‌ ಕುಮಾರ್‌, ಎಸ್‌.ಎಂ.ಒ ಡಬ್ಲೂ ಎಚ್‌ಒ ಡಾ| ಆರ್‌.ಎಸ್‌.ಶ್ರೀಧರ್‌, ಡಿಡಿಪಿಐ ಶ್ರೀಧರನ್‌, ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಉಷಾ, ಡಿಡಿಪಿಯು ನಾಗರಾಜ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ರಾಜಶೇಖರರೆಡ್ಡಿ, ಡಾ| ವಿಜಯಲಕ್ಷ್ಮೀ , ಡಾ| ಅಬ್ದುಲ್ಲಾ, ಡಾ| ಇಂದ್ರಾಣಿ, ಡಾ| ಮರಿಯಂಬಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next