Advertisement

ಕೋವಿಡ್ ನಿವಾರಣೆಗೆ ಪ್ರಾರ್ಥನೆ

12:13 PM May 15, 2020 | Naveen |

ಬಳ್ಳಾರಿ: ಜಗತ್ತಿಗೆ ನಡುಕ ಹುಟ್ಟಿಸಿರುವ ಕೋವಿಡ್ ಮಹಾಮಾರಿ ನಿಯಂತ್ರಿಸಲು ವಿಶ್ವಗುರು ಪೋಪ್‌ ಫ್ರಾನ್ಸಿಸ್‌ ಮತ್ತು ಮಾನವ ಐಕ್ಯಮತ್ಯದ ಉನ್ನತ ಸಮಿತಿ ಕರೆಯ ಮೇರೆಗೆ ಬಳ್ಳಾರಿ ಕ್ಯಾಥೋಲಿಕ್‌ ಡಯಾಸೀಸ್‌ ಆಫ್‌ ಧರ್ಮಾಧ್ಯಕ್ಷರ ನಿವಾಸದಲ್ಲಿ ಜಾಗತಿಕ ಪ್ರಾರ್ಥನೆ ಮತ್ತು ಉಪವಾಸ ಆಚರಿಸಲಾಯಿತು.

Advertisement

ಪ್ರಾಸ್ತಾವಿಕ ಮಾತನಾಡಿದ ಫಾ| ಐವನ್‌ ಪಿಂಟೊ, ಕೋವಿಡ್ ಮಹಾಮಾರಿ ಜಗತ್ತಿನಾದ್ಯಂತ ಹರಡಿದೆ. ಮಾನವ ಕುಲದ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ. ಕೋಟ್ಯಂತರ ಜನರಿಗೆ ಸೋಂಕು ಆವರಿಸಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಪೋಪ್‌ ಫ್ರಾನ್ಸಿಸ್‌ ಮತ್ತು ಮಾನವ ಐಕ್ಯಮತ್ಯದ ಉನ್ನತ ಸಮಿತಿಯು (ಹೈಯರ್‌ ಕಮಿಟಿ ಆಫ್‌ ಹ್ಯೂಮನ್‌ ಫ್ರಟರ್ನಿಟಿ) ಕರೆ ನೀಡಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲೂ ಗುರುವಾರ ಜಾಗತಿಕ ಪ್ರಾರ್ಥನೆ ಮತ್ತು ಉಪವಾಸ ದಿನವನ್ನಾಗಿ ಆಚರಿಸಲಾಗಿದೆ ಎಂದವರು ತಿಳಿಸಿದರು.

ಮನುಕುಲ ಆವರಿಸಿಕೊಂಡಿರುವ ಕೊರೊನ ವೈರಸ್‌ ಎಂಬ ರೋಗವನ್ನು ದೇವರ ಕೃಪೆಯಿಂದ ವಿನಾಶಗೊಳಿಸಲು ಪ್ರಾರ್ಥನೆ ಮತ್ತು ಉಪವಾಸ ದಿನವನ್ನಾಗಿ ಆಚರಿಸಲು ನಾವಿಂದು ಇಲ್ಲಿ ಸೇರಿದ್ದೇವೆ. ನ್ಯಾಯಾಧೀಶ ಮಹಮ್ಮದ್‌ ಅಬ್ಧೆಲ್‌ ಸಲಾಂ ಮಾತನಾಡಿದರು. ಧರ್ಮಾಧ್ಯಕ್ಷ ಹೆನ್ರಿ ಡಿಸೋಜ, ಬೈಬಲ್‌ ಗ್ರಂಥದ ಪವಿತ್ರ ನುಡಿಗಳನ್ನು ಪಠಿಸುತ್ತಾ ದೇವರಲ್ಲಿ ದೃಢ ವಿಶ್ವಾಸ ಹೆಚ್ಚಿಸಿ ಸೋಂಕಿನಿಂದ ಪ್ರಭಾವಿತರಾದವರಿಗೆ ಅಗತ್ಯ ಸೇವೆ, ಪರಿಹಾರ ಹಾಗೂ ಉಪಶಮನ ನೀಡುವುದರ ಮೂಲಕ ಸಮಾಜದಲ್ಲಿ ಸಹಕಾರ ಹೆಚ್ಚಿಸಿ ಸಹೋದರತ್ವದಿಂದ ಜೀವಿಸಬೇಕು ಎಂದು ಕರೆ ನೀಡಿದರು.

ಕಲ್ಯಾಣ ಸ್ವಾಮೀಜಿ ವಚನ ಸಾಹಿತ್ಯ ಪಠಿಸಿದರು. ಜಿಲ್ಲೆಯ ಖಾಝೀ ಸಿದ್ದಿಕಿ ಮೊಹಮಿತ್‌ ಕುರಾನಿನ ಪವಿತ್ರ ವಾಕ್ಯಗಳನ್ನು ಪಠಿಸಿದರು. ಬ್ರಹ್ಮ ಕುಮಾರಿ ಸಮಾಜದ ಮುಖ್ಯಸ್ಥೆ ನಿರ್ಮಲ ಸನಾತನ ಭಗವದ್ಗೀತಾ ಪವಿತ್ರ ಗ್ರಂಥವನ್ನು ಪಠಿಸಿದರು. ಜೈನ ಧರ್ಮದ ನಾಯಕರಾದ ಬಸಂತರವರು ಆಗಮ ಪವಿತ್ರ ಗ್ರಂಥದ ಪಠಣೆ ಮಾಡಿದರು. ಪಾಸ್ಟಾರ್‌ ಪ್ರಭಾಕರ್‌ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next