Advertisement

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

03:21 PM Jun 19, 2024 | Team Udayavani |

ಉದಯವಾಣಿ ಸಮಾಚಾರ
ಬಳ್ಳಾರಿ: ಅಪರೂಪದ ಸಸ್ಯ ಹಾಗೂ ಜೀವಸಂಕುಲಗಳಿರುವ ಸಂಡೂರಿನ ದೇವದಾರಿ ಪ್ರದೇಶದಲ್ಲಿ ಕುದುರೆಮುಖ (ಕೆಐಒಸಿಎಲ್‌) ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡುವಾಗ ಅರಣ್ಯ ಇಲಾಖೆ ವಿರೋಧದ ವರದಿಯನ್ನು
ಮರೆ ಮಾಚಿರುವುದು ಸ್ಥಳೀಯ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಈ ದೇವದಾರಿ ಪ್ರದೇಶ ಕುಮಾರಸ್ವಾಮಿ ದೇವ ಸ್ಥಾನಕ್ಕೆ ಎರಡೂವರೆ ಕಿ.ಮೀ. ದೂರ ದಲ್ಲಿದೆ. ಅದಕ್ಕೆ ಹೊಂದಿಕೊಂಡು ಈಗಾಗಲೇ ವಿ.ಎಸ್‌. ಲಾಡ್‌, ಎನ್‌ಎಂಡಿಸಿ ಗಣಿಗಾರಿಕೆಗಳಿವೆ. ಈ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಂಡೂರಿನ ಕುಮಾರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಾಲಿ ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ, ಈ ದೇವಸ್ಥಾನದಿಂದ ಮೂರು ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಗಣಿಗಾರಿಕೆಗೆ ನಿಷೇಧ ಹೇರುವುದಾಗಿ ಮಾತುಕೊಟ್ಟಿದ್ದರು ಎನ್ನಲಾಗಿದೆ.

ಸಿಎಂ ಆದಾಗ ಅನುಮತಿ ನೀಡಿರಲಿಲ್ಲ: ಈ ಹಿಂದೆ ನಡೆದ ಅಕ್ರಮ ಗಣಿಗಾರಿಕೆಯಿಂದಾಗಿ ಸಂಡೂರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಸುಮಾರು 500 ಹೆಕ್ಟೇರ್‌ನಷ್ಟು ಗಣಿಪ್ರದೇಶ ಖಾಲಿ ಬಿದ್ದಿದ್ದು, ಅಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಹುದಿತ್ತು. ಆದರೆ, ಹಿಂದೆ ಕುಮಾರಸ್ವಾಮಿಯವರೇ ಎರಡು ಬಾರಿ ಸಿಎಂ ಆಗಿದ್ದಾಗ ಅನುಮತಿ ನೀಡದೇ ಈಗ ಕೇಂದ್ರ ಸಚಿವರಾಗುತ್ತಿದ್ದಂತೆ ಕಡತಕ್ಕೆ ಸಹಿ ಹಾಕಲು ಏನು ಕಾರಣ ಎಂಬುದು ಸ್ಥಳೀಯ ಹೋರಾಟಗಾರ ಶ್ರೀಶೈಲ ಆಲ್ದಳ್ಳಿ ಸೇರಿ ಹಲವರ ಪ್ರಶ್ನೆಯಾಗಿದೆ.

ವರದಿ ಮರೆಮಾಚಿದ ಸರ್ಕಾರ: ರಾಜ್ಯ ಸರ್ಕಾರ ದೇವದಾರಿ ಗಣಿ ಪ್ರದೇಶ 482.36
ಹೆಕ್ಟೇರ್‌ ವ್ಯಾಪ್ತಿಯನ್ನು ಕೆಐಒಸಿಎಲ್‌ ಕಂಪನಿಗೆ
ಮೀಸಲಿಟ್ಟು 2017ರಲ್ಲಿ ಅ ಧಿಸೂಚನೆ ಹೊರಡಿಸಿತ್ತು. ಭಾರತದಲ್ಲೇ ಅತ್ಯಂತ ಅಪರೂಪದ ಸಸ್ಯ, ಜೀವ ಸಂಕುಲಗಳಿರುವ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಅಂದಿನ ಅರಣ್ಯಾಧಿಕಾರಿಗಳು ವಿಸ್ತೃತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರಕ್ಕೆ ಕಳುಹಿಸಿದೆಯಾ? ಇಲ್ಲವೇ? ಅಥವಾ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ್ದರೆ,  ಕೇಂದ್ರದ ಸಚಿವಾಲಯದಲ್ಲಿ ವರ್ಷ ದಿಂದ ಬಾಕಿಯಿದ್ದ ಕಡತ ತಿರಸ್ಕರಿಸಲಾಗು ತ್ತಿತ್ತು. ಇದೀಗ ಸಚಿ ವರು ಸಹಿ ಹಾಕಿದ್ದಾರೆ ಎಂದರೆ ಅರಣ್ಯ ಅ ಧಿಕಾರಿ ಗಳು ನೀಡಿದ್ದ ವರದಿ ಎಲ್ಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿ ಸ ಬೇಕೆಂಬುದು
ಹೋರಾಟಗಾರರ ಒತ್ತಾಯ.

ದೇವದಾರಿ ಪ್ರದೇಶದಲ್ಲಿ ಅಪರೂಪದ ಮರಗಳು
ಸಂಡೂರಿನ ದೇವದಾರಿ ಗಣಿಪ್ರದೇಶದಲ್ಲಿ ಗಣಿಗಾರಿಕೆಯಿಂದ 99 ಸಾವಿರದಷ್ಟು ಮರಗಳಿಗೆ ಕೊಡಲಿಪೆಟ್ಟು ಬೀಳಲಿದೆ. ಈ
ಪ್ರದೇಶದಲ್ಲಿ ಅಪರೂಪದ ಮರಗಳಿವೆ. ಅದೇ ರೀತಿ ಈ ಪ್ರದೇಶದಲ್ಲಿ ಹಲವಾರು ವನ್ಯಜೀ ವಿ ಸಂಕುಲಗಳಿವೆ. ಈ ಕಾಡಿ
ನೊಂದಿಗೆ ಹೊಂದಿಕೊಂಡು ಜೀವಿಸುತ್ತಿರುವ ಜನರಿಗೆ, ಜೀವಿಗಳಿಗೆ ಗಣಿಗಾರಿಕೆ, ಅರಣ್ಯ \ನಾಶವಾಗಿ ದೀರ್ಘ‌ಕಾಲಿಕ ಕಾಯಿಲೆಗಳು
ಬರುವ ಸಾಧ್ಯತೆಯೂ ಇದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಅರಣ್ಯ ಅಧಿ ಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ
ಯಲ್ಲಿ ಉಲ್ಲೇಖೀಸಿದ್ದರು. ಆದರೆ, ಈ ವರದಿ ಪರಿಗಣಿಸದೇ ಸಚಿವ ಎಚ್‌. ಡಿ.ಕುಮಾರ ಸ್ವಾಮಿ ಅವರು ಗಣಿಗಾ ರಿಕೆ ಕಡತಕ್ಕೆ ಸಹಿ
ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

*ವೆಂಕೋಬಿ ಸಂಗನಕಲು

Advertisement

Udayavani is now on Telegram. Click here to join our channel and stay updated with the latest news.

Next