Advertisement

ರೈತ ವಿರೋಧಿ ಕಾಯ್ದೆ ಖಂಡಿಸಿ ಮಾ. 5ರಿಂದ ಕಲ್ಯಾಣದಿಂದ ಬಳ್ಳಾರಿ ಪಾದಯಾತ್ರೆ

12:47 PM Mar 01, 2021 | Team Udayavani |

ಬಳ್ಳಾರಿ: ರೈತ ವಿರೋಧಿ ಕಾಯ್ದೆ ರದ್ದತಿ ವಿರೋಧಿಸಿ ಮಾ. 5ರಿಂದ ಬಸವ ಕಲ್ಯಾಣದಿಂದ ಬಳ್ಳಾರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

Advertisement

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ನಂಜುಂಡ ಸ್ವಾಮಿ ಬಣ) ರಾಜ್ಯ ಕಾರ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಮಾಧವ ರೆಡ್ಡಿ, 5ರಿಂದ ಆರಂಭ ಆಗಲಿರುವ ಪಾದಯಾತ್ರೆ ಮಾ.23ರಂದು ಬಳ್ಳಾರಿಗೆ ಆಗಮಿಸಲಿದ್ದು, ಅಂದು ಭಗತ್ ಸಿಂಗ್ ನೇಣಿಗೆ ಏರಿಸಿದ ದಿನವಾಗಿದ್ದು ಅಂದು ಬಳ್ಳಾರಿ ನಗರದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಅಂದಿನ ಸಭೆಯಲ್ಲಿ ಭಗತ್ ಸಿಂಗ್ ಅಳಿಯ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹುಮನಾಬಾದ, ಶಹಾಪುರ, ರಾಯಚೂರು, ಮಾನ್ವಿ, ಸಿಂಧನೂರು, ಬೀದರ್, ಗುಲ್ಬರ್ಗಾ, ಯಾದಗಿರಿ -ಬಳ್ಳಾರಿ ಮಾರ್ಗವಾಗಿ ಬಳ್ಳಾರಿಗೆ ತಲುಪಲಿದೆ. ಪ್ರತಿದಿನ 20 ಕಿ.ಮೀ ಪಾದಯಾತ್ರೆ ಸಾಗಲಿದೆ. ಸಾಹಿತಿ ಸಾ.ರಘುನಾಥ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು. 250 ಜನ ಬಳ್ಳಾರಿಯಿಂದ ಬಸವ ಕಲ್ಯಾಣಕ್ಕೆ ತೆರಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿದ ನಟ ದರ್ಶನ್

ಚಾಗನೂರು ಭೂ ಹೋರಾಟ ಸಮಿತಿ, ಜನಗಣಮನ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾ.4ರಂದು ಚಾಗನೂರಿನಲ್ಲಿ ಸಭೆ ನಡೆಸಿ, ಸಹಕಾರ ಕೊರಲಿದ್ದೇವೆ ಎಂದು ಅವರು ಹೇಳಿದರು.

Advertisement

ಸಂಘದ ಅಸುಂಡಿ, ತಿಮ್ಮನ ಗೌಡ ಭೈರಾಪುರ, ಶೇಖರ ಲಿಂಗ, ಚಗನೂರು ವೀರಭದ್ರ, ಹಳ್ಳಪ್ಪ ಹೊಸಹಳ್ಳಿ, ಲಕ್ಷ್ಮಮ್ಮ ಚಾಗನೂರು,ಜನಗಣಮನ ವೇದಿಕೆಯ ಗಂಗಿರೆಡ್ಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next