Advertisement
ಕೊರೊನಾ ವೈರಸ್ ಜಗತ್ತನೇ ಬೆಚ್ಚಿ ಬೀಳಿಸಿದೆ. ಭಾರತಕ್ಕೂ ಆವರಿಸಿರುವ ಈ ವೈರಸ್ ರಾಜ್ಯದಲ್ಲಿ ಈಗಾಗಲೇ ಒಬ್ಬರನ್ನು ಬಲಿ ತೆಗೆದುಕೊಂಡಿದ್ದು ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಿಸದಂತೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿರುವ ಜಿಲ್ಲಾಡಳಿತ, ಸಾರ್ವಜನಿಕರಲ್ಲೂ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸಿ, ಆತಂಕ ಬೇಡ ಎಂದು ಜಾಗೃತಿ ಮೂಡಿಸುತ್ತಿದೆ. ಅದರಂತೆ ಸುರಕ್ಷತಾ ಕ್ರಮಕ್ಕೆ ಮುಂದಾಗುತ್ತಿರುವ ಜನರಿಗೆ ಔಷಧ ಮಳಿಗೆಗಳಲ್ಲಿ ಮಾಸ್ಕ್ಗಳು ಲಭಿಸುತ್ತಿಲ್ಲ. ಕೇಳಿದರೆ ಸ್ಟಾಕ್ ಇಲ್ಲ, ಖಾಲಿಯಾಗಿದೆ ಎಂಬ ಉತ್ತರ ಔಷಧ ಮಳಿಗೆಗಳ ಮಾಲೀಕರಿಂದ ಬರುತ್ತದೆ. ಇದು ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಲಿದೆ.
Related Articles
Advertisement
ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಮಾಸ್ಕ್ ಮೊರೆ ಹೋಗುವುದು ಸಾಮಾನ್ಯ. ಆದರೆ, ಈ ಮಾಸ್ಕ್ಗಳನ್ನು ಎಲ್ಲರೂ ಧರಿಸುವ ಅಗತ್ಯವಿಲ್ಲ. ಕೊರೊನಾ ಪ್ರಕರಣ ದೃಢಪಟ್ಟಾಗ ಸೋಂಕು ಹರಡಿರುವವರ ಸುತ್ತಮುತ್ತಲೂ ಇರುವವರು ಮಾಸ್ಕ್ ಸೇರಿ ಇತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನು ಹೊರತುಪಡಿಸಿ ಎಲ್ಲರೂ ಧರಿಸುವ ಅಗತ್ಯವಿಲ್ಲ. ಆದರೆ, ಸೋಂಕು ಹರಡಿಲ್ಲದಿದ್ದರೆ ಫೇಸ್ ಮಾಸ್ಕ್ ಬಳಸುವುದರಿಂದ ಯಾವುದೇ ಉಪಯೋಗವಿಲ್ಲ.
ಮಾಸ್ಕ್ ಧರಿಸಿದ್ದರೂ ಬೇರೆಯವರಿಂದ ನಿಮಗೆ ಕೊರೊನಾ ವೈರಸ್ ಸೋಂಕು ತಗುಲಬಹುದು. ಈಗಾಗಲೇ ಸೋಂಕಿತರಾಗಿದ್ದರೆ ನಿಮ್ಮಿಂದ ಇತರರಿಗೆ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸಬೇಕು. ಹಾಗಾಗಿ ಎಲ್ಲರೂ ಮಾಸ್ಕ್ ಧರಿಸುವುದರಿಂದ ಉಪಯೋಗವಿಲ್ಲ.ಡಾ| ಬಸಾರೆಡ್ಡಿ, ಜಿಲ್ಲಾ ತಜ್ಞವೈದ್ಯರು,
ಜಿಲ್ಲಾಸ್ಪತ್ರೆ ಬಳ್ಳಾರಿ ಕೊರೊನಾ ವೈರಸ್‌ನಿಂದ ಎಚ್ಚರಿಕೆ ವಹಿಸಿ, ಆತಂಕ ಬೇಡ. ವೈರಸ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸೋಂಕಿತರ ಸುತ್ತಮುತ್ತಲೂ ಇರುವವರು ಮಾಸ್ಕ್ ಧರಿಸಬೇಕು. ಜತೆಗೆ ಸೋಂಕು ಇತರರಿಗೆ ಹರಡದಂತೆ ಸೋಂಕಿತರು ಮಾಸ್ಕ್ ಧರಿಸಬೇಕು. ಅಷ್ಟೇ ಹೊರತು ಎಲ್ಲರೂ ಮಾಸ್ಕ್ಧ ರಿಸುವುದು ಬೇಡ. ಇದರೊಂದಿಗೆ ಸ್ವತ್ಛತೆ ಸೇರಿ ಇನ್ನಿತರೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು.
ಡಾ| ಎಚ್.ಎಲ್. ಜನಾರ್ದನ್,
ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ ವೆಂಕೋಬಿ ಸಂಗನಕಲ್ಲು