Advertisement
ಸರಕಾರದ ಆದೇಶದಂತೆ 2018-19ನೇ ಶೈಕ್ಷಣಿಕ ವರ್ಷದಿಂದ ಒಂದೇ ಭೌಗೋಳಿಕ ಸ್ಥಳದಲ್ಲಿ ಎಲ್.ಕೆ.ಜಿ., ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಒಟ್ಟುಗೂಡಿಸಿ ಬೆಳ್ಳಾರೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗಿತ್ತು.
ಹೆತ್ತವರು ಹಾಗೂ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಉತ್ತಮ ದರ್ಜೆಯ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ತರಗತಿಗಳಿಗೆ ಗುಣಮಟ್ಟದ ಕಟ್ಟಡಗಳ ವ್ಯವಸ್ಥೆಯಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉಪಯುಕ್ತವಾಗುವ ವಿಶೇಷ ವೃತ್ತಿ ಕೌಶಲ್ಯ ತರಬೇತಿ, ನೂತನವಾಗಿ ಈ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಬಾಲಕರಿಗೆ ಜೆ.ಒ.ಸಿ. ಮತ್ತು ಬಾಲಕಿಯರಿಗೆ ಫ್ಯಾಶನ್ ಡಿಸೈನಿಂಗ್ನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. ಈ ಶಾಲೆಯಲ್ಲಿ ಏಕಕಾಲಕ್ಕೆ 4 ಸ್ಮಾರ್ಟ್ ಕ್ಲಾಸ್ಗಳನ್ನು ನಡೆಸುವಷ್ಟು ಸೌಲಭ್ಯಗಳಿವೆ. 12 ಖಾಯಂ ಹಾಗೂ ಇಬ್ಬರು ಪ್ರಭಾರ ಸಹಿತ ಒಟ್ಟು 14 ಶಿಕ್ಷಕರನ್ನು ಶಾಲೆ ಹೊಂದಿದೆ. ದೊಡ್ಡ ವಿಸ್ತೀರ್ಣವುಳ್ಳ ಕ್ರೀಡಾಂಗಣ ಶಾಲೆಯ ಆವರಣದೊಳಗಿದೆ. ಪೂರ್ವ ಪ್ರಾಥಮಿಕ ಶಾಲೆಗೆ ತರಬೇತಿ ಪಡೆದ ಒಬ್ಬರು ಗೌರವ ಶಿಕ್ಷಕಿ ಹಾಗೂ ಆಯಾ ನೇಮಿಸಲಾಗಿದೆ. 30ರ ಗಡಿ ದಾಟಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿ ಪಡೆದಿರುವುದರಿಂದ ಹೆಚ್ಚುವರಿ ಶಿಕ್ಷಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ.
Related Articles
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಕೊಠಡಿಗಳ ಸಮಸ್ಯೆ ಎದುರಾಗಲಿದ್ದು ತರಗತಿ ಕೊಠಡಿ ನಿರ್ಮಾಣದ ಅಗತ್ಯವಿದೆ. ಶಾಲಾ ಗೋಡೆಗಳಿಗೆ ಬಣ್ಣ ಸಹಿತ ಹಲವು ದುರಸ್ತಿ ಕಾರ್ಯಗಳು ಆಗಬೇಕಿವೆ. ಕಳೆದ ವರ್ಷ ನಿರ್ವಹಣೆ ಹಾಗೂ ಇತರ ಖರ್ಚಿಗೆ 17 ಲಕ್ಷ ರೂ. ಅನುದಾನ ಬಂದಿತ್ತು. ಈ ಬಾರಿ ಕೇವಲ 5 ಲಕ್ಷ ರೂ. ದೊರೆತಿದೆ. ಹೀಗಾಗಿ, ಶಾಲೆ ಸರಕಾರ ಮತ್ತು ದಾನಿ ಗಳ ನಿರೀಕ್ಷೆ ಯಲ್ಲಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ರಾತ್ರಿ ಪಾಳಿ ಕಾವಲಿಗೆ ಹೋಮ್ಗಾರ್ಡ್ ಅಗತ್ಯವಿದ್ದು, ಶಾಲೆಯ ಎಸ್ಡಿಎಂಸಿ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ ನೀಡಲಾಗಿದೆ.
Advertisement
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಈ ವರ್ಷದ ಆಂಗ್ಲ ಮಾಧ್ಯಮ ಎಲ್.ಕೆ.ಜಿ.ಗೆ 56 ಮಕ್ಕಳು, 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 63, ಕನ್ನಡ ಮಾಧ್ಯಮಕ್ಕೆ 6 ಮಕ್ಕಳು, 2ನೇ ತರಗತಿಗೆ 49, 3ನೇ ತರಗತಿಗೆ 42, 4ನೇ ತರಗತಿಗೆ 54, 5ನೇ ತರಗತಿಗೆ 45 ಮಕ್ಕಳು, 6ನೇ ತರಗತಿಯ ಆಂಗ್ಲಮಾಧ್ಯಮಕ್ಕೆ 49 ಮತ್ತು ಕನ್ನಡ ಮಾಧ್ಯಮಕ್ಕೆ 45, 7ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 50 ಮತ್ತು ಕನ್ನಡ ಮಾಧ್ಯಮಕ್ಕೆ 64, 8ನೇ ತರಗತಿಗೆ 151, 9ನೇ ತರಗತಿಗೆ 149, 10ನೇ ತರಗತಿಗೆ 113, ಪ್ರಥಮ ಪಿಯುಸಿಗೆ 141 ಹಾಗೂ ದ್ವಿತೀಯ ಪಿಯುಸಿಗೆ 98 ಮಕ್ಕಳು ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ದಾಖಲಾತಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.
ಬೆಳ್ಳಾರೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿರುವ ಸರಕಾರ 1 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದು, ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣವಾಗಿದ್ದು, ಆಕರ್ಷಕ ಪ್ರವೇಶದ್ವಾರ, ಭದ್ರತಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆಯ ಗೋಡೆಗಳಿಗೂ ಬಣ್ಣ ಹಚ್ಚಿ ಶೃಂಗರಿಸಲಾಗಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ರೂಪಿಸಲಾಗಿದೆ. ಪ್ರಸಕ್ತ ವರ್ಷ ಲೋಕೋಪಯೋಗಿ ಇಲಾಖೆ 1.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.
ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ಆಂಗ್ಲ ಮಾಧ್ಯಮ ಆರಂಭವಾದ ಬಳಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಯಿಂದ 1.20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುವುದು.
– ಉಮಾಕುಮಾರಿ, ಉಪ ಪ್ರಾಂಶುಪಾಲೆ, ಕೆ.ಪಿ.ಎಸ್. ಬೆಳ್ಳಾರೆ
ಕೋಟಿ ರೂ. ಅನುದಾನ