Advertisement

ಪ್ರಯಾಣ ಭತ್ಯೆಗಾಗಿ ಜಟಾಪಟಿ

05:29 PM Sep 23, 2019 | Team Udayavani |

ಬಳ್ಳಾರಿ: ಸಮಯದ ಅಭಾವ, ಕ್ರೀಡಾಪಟುಗಳ ಪಯಣದ ಭತ್ಯೆ ಸಮಸ್ಯೆ ನಡುವೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಭಾನುವಾರ ತರಾತುರಿಯಲ್ಲಿ ನಡೆಯಿತು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಮಯದ ಅಭಾವದಿಂದ ರಜಾ ದಿನವಾದ ಭಾನುವಾರ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ನಿಗದಿತ ಸಮಯ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಬೇಕಾಗಿದ್ದ ಕ್ರೀಡಾಕೂಟಕ್ಕೆ ದೂರದ ತಾಲೂಕುಗಳಿಂದ ಸ್ವಂತ ವಾಹನ ಮಾಡಿಕೊಂಡು ಬಂದಿದ್ದ ಕ್ರೀಡಾಪಟುಗಳು, ಪ್ರಯಾಣ ಭತ್ಯೆಯನ್ನು ಈಗಲೇ ನೀಡಬೇಕೆಂದು ಪಟ್ಟು ಹಿಡಿದರು. ಪರಿಣಾಮ ಕ್ರೀಡಾಕೂಟಕ್ಕೆ ಮಧ್ಯಾಹ್ನ 1 ಗಂಟೆಗೆ ಚಾಲನೆ ನೀಡಲಾಯಿತು. ಈ ವೇಳೆ ಕ್ರೀಡಾ ಇಲಾಖೆ ಅಧಿಕಾರಿಗಳು, ಪ್ರಯಾಣ ಭತ್ಯೆಯನ್ನು ಯಾವುದೇ ಕಾರಣಕ್ಕೂ ಈಗಲೇ ನೀಡಲಾಗದು. ಎಲ್ಲ ಹಣವನ್ನು ಆಯಾ ತಂಡಗಳ ಸಂಬಂಧಪಟ್ಟವರ ಬ್ಯಾಂಕ್‌ ಖಾತೆಗಳಿಗೆ ಎರಡು ದಿನಗಳೊಳಗಾಗಿ ಜಮಾಗೊಳಿಸುವುದಾಗಿ ತಿಳಿಸಿದರು.

ಇದಕ್ಕೆ ಒಪ್ಪದ ಕ್ರೀಡಾಪಟುಗಳು ಭತ್ಯೆಯನ್ನು ಈಗಲೇ ನೀಡಬೇಕು. ಈ ಹಿಂದೆಯೂ ಅಧಿಕಾರಿಗಳು ಬ್ಯಾಂಕ್‌ ಖಾತೆಗೆ ಹಾಕುವುದಾಗಿ ಹೇಳಿ ಈವರೆಗೂ ಪಾವತಿಸಿಲ್ಲ. ಹಾಗಾಗಿ ಸ್ಥಳದಲ್ಲೇ ಭತ್ಯೆಯನ್ನು ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಪ್ರಯಾಣ ಭತ್ಯೆಯನ್ನು ನಿಮ್ಮ ಕೈಗಳಿಗೆ ನೀಡಲಾಗುವುದು. ಇಲಾಖೆಯಲ್ಲಿ ಅಂತಹ ನಿಯಮಗಳೂ ಇಲ್ಲ. ಆಸಕ್ತರು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದು ಅಥವಾ ವಾಪಸ್‌ ಹೋಗಬಹುದು ಎಂದು ಖಾರವಾಗಿ ಹೇಳಿದರು.

ನಂತರ ತರಾತುರಿಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡೆಗಳ ಸಮಯ ಕಡಿತ: ತರಾತುರಿಯಲ್ಲಿ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರೀಡೆಗಳನ್ನು ಸಹ ನಿಗದಿತ ಸಮಯದಲ್ಲಿ ನಡೆಸಲಿಲ್ಲ. ಖೊಖೋ ಆಟವನ್ನು ಕೇವಲ 7 ನಿಮಿಷಕ್ಕೆ ಒಂದು ಇನ್ನಿಂಗ್ಸ್‌ನಂತೆ 14 ನಿಮಿಷದಲ್ಲಿ ಆಟವನ್ನೇ ಪೂರ್ಣಗೊಳಿಸಲಾಗುತ್ತಿತ್ತು. ಹೀಗೆ ಇನ್ನಿತರೆ ಕ್ರೀಡೆಗಳನ್ನು ಸಹ ನಿರ್ದಿಷ್ಟ ಸಮಯದಲ್ಲಿ ಆಡಿಸದೆ ತರಾತುರಿಯಲ್ಲಿ ಮುನ್ನಡೆಸುತ್ತಿದ್ದ ದೃಶ್ಯ ಕಂಡುಬಂತು.

Advertisement

ತರಾತುರಿಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್‌ ರಾಥೋಡ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅ ಧಿಕಾರಿ ಸುರೇಶ್‌ಬಾಬು, ಹಾಕಿ ತರಬೇತುದಾರ ಜಾಕೀರ್‌, ಕ್ರೀಡಾ ಸಂಕೀರ್ಣದ ವ್ಯವಸ್ಥಾಪಕ ಶಿವಕುಮಾರ್‌ ನಾಯ್ಕ, ರಾಮಕೃಷ್ಣ, ಮುಖಂಡರಾದ ಗಾದೆಪ್ಪ, ಮಹಾಂತೇಶ್‌, ಶಿವಕುಮಾರ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next