Advertisement

ಬಳ್ಳಾರಿಯಲ್ಲಿ ಮತ್ತೆ 26 ಸೋಂಕು ಪತ್ತೆ

12:43 PM Jun 22, 2020 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಭಾನುವಾರ ಮತ್ತೆ ಹೊಸದಾಗಿ 26 ಕೋವಿಡ್‌ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 442ಕ್ಕೆ ಏರಿಕೆಯಾಗಿದೆ.

Advertisement

ಬಳ್ಳಾರಿ ತಾಲೂಕಿನಲ್ಲಿ 13, ಸಂಡೂರು ತಾಲೂಕು 9, ಹೊಸಪೇಟೆ 2, ಸಿರುಗುಪ್ಪ ತಾಲೂಕಿನಲ್ಲಿ 2 ಸೇರಿ ಒಟ್ಟು 26 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಜಿಂದಾಲ್‌ ಸೋಂಕಿತ ನೌಕರರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ. ಇದರಲ್ಲಿ ಪಿ.4996 ಸೋಂಕಿತರಿಂದ 4 ಜನರಿಗೆ ಸೋಂಕು ಹರಡಿದ್ದು, ಮೂವರು ಪಿ.6490 ಸೋಂಕಿತರ ಸಂಪರ್ಕಿತರಾಗಿದ್ದಾರೆ.

ಐದು ಜನರು ಐಎಲ್‌ಐ ಪ್ರಕರಣಗಳಾಗಿದ್ದು, ಒಬ್ಬರು ದುರ್ಬಲ ವರ್ಗದವರಾಗಿದ್ದಾರೆ. ಇನ್ನುಳಿದವರು ವಿವಿಧ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 442 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 112 ಜನರು ಗುಣವಾಗಿ ಮನೆಗೆ ಸೇರಿದ್ದಾರೆ. ಇಬ್ಬರು ಮೃತಪಟ್ಟಿದ್ದು, 328 ಸಕ್ರಿಯ ಪ್ರಕರಣಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next