Advertisement

ಏರುತ್ತಲಿದೆ ಸೋಂಕಿತರ ಸಾವಿನ ಸಂಖ್ಯೆ

06:44 PM Jul 02, 2020 | Naveen |

ಬಳ್ಳಾರಿ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಮೂವರು ಮಹಿಳೆಯರು, ಇಬ್ಬರು ಪುರುಷ ಸೇರಿ ಐವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಸತ್ತವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, ಕಳೆದ ಮೂರು ದಿನಗಳಲ್ಲೇ 18 ಜನರು ಸಾವಿಗೀಡಾಗಿದ್ದಾರೆ.

Advertisement

ಜೂ.28ರಂದು ಭಾನುವಾರ ಒಂದೇ ದಿನ ನಾಲ್ವರು ಮೃತಪಟ್ಟಿದ್ದ ಕೋವಿಡ್‌ ಸೋಂಕಿಗೆ ಜೂ.29ರಂದು ಸೋಮವಾರ 10 ಜನರು ಸೋಂಕಿನಿಂದ ಸಾವನ್ನಪ್ಪಿದ್ದರು. ಇದೀಗ ಜೂ.30ರಂದು ಮಂಗಳವಾರವೂ ಐವರು ಬಲಿಯಾಗಿದ್ದಾರೆ. ಬಳ್ಳಾರಿ ತಾಲೂಕು ಕೋಳೂರು ಗ್ರಾಮದ 31 ವರ್ಷದ ಮಹಿಳೆ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದು, ಜೂ.28ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಜೂ.29ರಂದು ಮೃತಪಟ್ಟಿದ್ದಾರೆ.

ಹೊಸಪೇಟೆ ಎನ್‌ಸಿ ಕಾಲೋನಿಯ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿನ 63 ವರ್ಷದ ವೃದ್ಧ ರಕ್ತದೊತ್ತಡ, ನ್ಯುಮೋನಿಯಾ ಸಮಸ್ಯೆಯಿಂದ ಜೂ.28ರಂದು ದಾಖಲಾಗಿ ಜೂ. 29ರಂದು ಸೋಮವಾರ ಅಸುನೀಗಿದ್ದಾರೆ. ಬಳ್ಳಾರಿಯ 55 ವರ್ಷದ ಮಹಿಳೆ ರಕ್ತದೊತ್ತಡ, ಹೃದಯ ಸಮಸ್ಯೆಯಿಂದ ಜೂ.27ರಂದು ದಾಖಲಾಗಿ ಜೂ.29ರಂದು ಮೃತಪಟ್ಟಿದ್ದಾರೆ. ಜಿಲ್ಲೆಯ ಸಂಡೂರಿನ ಕೆಎಚ್‌ಬಿ ಕಾಲೋನಿಯ 58 ವರ್ಷದ ಮಹಿಳೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಜೂ.29ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಅಸುನೀಗಿದ್ದಾರೆ. ಮತ್ತೂಬ್ಬ ಪುರುಷ ಮೃತಪಟ್ಟಿದ್ದು, ಪೂರ್ಣ ಮಾಹಿತಿ ತಿಳಿದು ಬಂದಿಲ್ಲ. ಇವರೆಲ್ಲರ ಸಾವಿಗೂ ಮುನ್ನ ಕೋವಿಡ್‌ ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ಎಂದು ಬಂದಿದ್ದು, ಎಸ್‌ಒಪಿ ನಿಯಮಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next