Advertisement

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

05:46 PM Apr 27, 2024 | Team Udayavani |

ಬಳ್ಳಾರಿ: ಕಾಂಗ್ರೆಸ್ ಪಕ್ಷ ತಮ್ಮ ಚಿಹ್ನೆ ಬದಲು ಮಾಡಿದ್ದಾರೆಯೇ? ಹಸ್ತದ ಬದಲು ಚೊಂಬು ಸಿಂಬಲ್ ಮಾಡಿಕೊಂಡಿದ್ದಾರೆ. ರಾಹುಲ್ ಭಾಷಣದಲ್ಲಿ ಹಸ್ತದ ಚಿಹ್ನೆ ಬದಲು ಚೊಂಬು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆಯೇ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಹೋದಲ್ಲಿ ಬಂದಲ್ಲಿ ಚೊಂಬು ಹಿಡಿದುಕೊಂಡಿದ್ದಾರೆ. ರಾಜ್ಯದಲ್ಲಿ ಚೊಂಬುಗಳ ಗುತ್ತಿಗೆ ಪಡೆದಿರುವ ಮತ್ತು ಇದೀಗ ಜನರಿಗೆ ಚೆಂಬು ನೀಡುವ ಪಕ್ಷವೆಂದರೆ ಅದು ಕಾಂಗ್ರೆಸ್. ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡದೆ ರಾಜ್ಯದ ಜನರಿಗೆ ಚೊಂಬು ನೀಡಿದ್ದಾರೆ. ಹತ್ತು ತಿಂಗಳಿಂದ ಒಬ್ಬರಿಗೆ ನಿರುದ್ಯೋಗಿ ಭತ್ಯೆ ನೀಡಿಲ್ಲ. ಯುವಕರಿಗೆ ಕಾಂಗ್ರೆಸ್ ಚೊಂಬು‌ ನೀಡಿದೆ. ರೈತರಿಗೆ ನೀಡುವ ಹಣ ಕೂಡ ಸಂಪೂರ್ಣ ನಿಲ್ಲಿಸಿ ರೈತರಿಗೆ ಚೊಂಬು ನೀಡಿದೆ. ಮಹಿಳೆಯರಿಗೆ ಉಚಿತ ಬಸ್ ಎಂದು‌ ಕೆಂಪು ಬಸ್ ಸೀಮಿತ ಮಾಡಿದ್ರು ಬಸ್ ಕಡಿಮೆ ಮಾಡಿದ್ರು, ಸಾರಿಗೆ ದರ ಹೆಚ್ಚು ಮಾಡಿ ಚೊಂಬು ನೀಡಿದರು. ಕರೆಂಟ್ ಫ್ರೀ ಎಂದು ಅದಕ್ಕೆ ನೂರಾರು ಕಂಡಿಷನ್ ಹಾಕಿ ಯೂನಿಟ್ ದರ ಜಾಸ್ತಿ‌ ಮಾಡಿ ಚೊಂಬು ನೀಡಿದೆ. 5 ಕೆಜಿ ಅಕ್ಕಿ‌ ಫ್ರೀ ಎಂದ್ರು ಕೇಂದ್ರದ ಅಕ್ಕಿಗೆ ತಮ್ಮ ಲೇಬಲ್ ಹಾಕಿ ಕೊಟ್ಟು ಜನರಿಗೆ ಚೊಂಬು ನೀಡಿದರು. ಪರೀಕ್ಷೆ ವಿಚಾರದಲ್ಲಿ ಮಕ್ಕಳ ಜೊತೆಗೆ ಪೋಷಕರಿಗೆ ಗೊಂದಲ ನೀಡಿ ಚೊಂಬು ನೀಡಿದರು. ಸಿಎಂ ಡಿಸಿಎಂಗೆ ಜನರು ಹೇಗೆ ಚೊಂಬು ಕೊಡಬೇಕೆಂದು ಗೊತ್ತಿದೆ ಎಂದು ಸುರೇಶ್ ಕುಮಾರ್ ಟೀಕೆ ಮಾಡಿದರು.

ಗರೀಬಿ‌ ಹಠಾವೋ ಸ್ಲೋಗನ್ ನೀಡಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ಬಡತನವನ್ನೇ ಜನರಿಗೆ ಕೊಡುಗೆ ನೀಡಿದೆ. ಚೊಂಬುಗಳ ಸರದಾರ ಕಾಂಗ್ರೆಸ್ ಪಕ್ಷ. ಬಿಸಿಲಿನಿಂದ ಬಸವಳಿದಂತೆ ಕಾಂಗ್ರೆಸ್ ಆಡಳಿತದಿಂದ ಜನರು ಬಸವಳಿದಿದ್ದಾರೆ. ಧನ್ಯವಾದಗಳ ಮೂಲಕ ಜನರೇ ಜೂನ್ 4ರಂದು ಕಾಂಗ್ರೆಸ್ ಗೆ ಚೊಂಬು ನೀಡುತ್ತಾರೆ ಎಂದರು.

ಜೆಡಿಎಸ್ ಬಿಜೆಪಿ ಕಾರ್ಯಕರ್ತರು ‌ಜಂಟಿ ಕಾರ್ಯಚರಣೆ ಮಾಡಿದ್ದು ನಿನ್ನೆಯ 14 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಹಾಸನನದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಚಾರಿತ್ರ್ಯ ಹರಣ ಮಾಡುವುದು ಹೆಚ್ಚಾಗಿದೆ. ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕು. ಯಾವುದೊ ಒಂದು ಚಾನೆಲ್ ಪ್ರಸಾರ ಮಾಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಪರಿಶೀಲಿಸಬೇಕು ಎಂದರು.

ಬೆಂಗಳೂರಿನಲ್ಲಿ ಮತದಾನ ಕಡಿಮೆಗೆ ಪರೋಕ್ಷವಾಗಿ ಜನರ ಜೊತೆ ಆಯೋಗ ಕೂಡ ಕಾರಣ ಎಂದು ಸುರೇಶ್ ಕುಮಾರ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next