Advertisement
ಪಾಲಿಕೆ ಕಚೇರಿಯಲ್ಲಿ ಆಯುಕ್ತರ ಪಿಎ ಮಲ್ಲಿಕಾರ್ಜುನ ಪಾಟೀಲ್ ಮತ್ತು ಅಟೆಂಡರ್ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿದ್ದಿದ್ದರು. ಇದಲ್ಲದೇ ಪಾಲಿಕೆ ಆಯುಕ್ತರೇ ಫಾರ್ಮ್ ನಂ.3 ನೀಡಲು 5 ಲಕ್ಷ ರೂ. ಲಂಚ ಪಡೆದಿರುವ ಬಗ್ಗೆ ವೀಡಿಯೋ, ಆಡಿಯೋ ಸಿಕ್ಕಿರುವ ಹಿನ್ನೆಲೆಯಲ್ಲಿ ತುಷಾರಮಣಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಕಾಯ್ದಿರಿಸಿ, ತುಷಾರಮಣಿಯವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲಿಯವರೆಗೆ ಬುಡಾ ಆಯುಕ್ತ ಈರಪ್ಪ ಬಿರಾದಾರ್ ಅವರನ್ನು ಪ್ರಭಾರಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. Advertisement
ಬಳ್ಳಾರಿ: ಲಂಚ ಸ್ವೀಕಾರ; ಪಾಲಿಕೆ ಆಯುಕ್ತೆ ಅಮಾನತು
09:29 PM Oct 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.