ಬಳ್ಳಾರಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳರು ಕಳ್ಳರ ಜೊತೆಗೆ ಸೇರಿಕೊಂಡು ಕಳ್ಳತನ ಮಾಡುವ ಸುದ್ದಿಗಳನ್ನು ಓದಿರುತ್ತೇವೆ. ಆದರೆ ಕಳ್ಳರ ಜೊತೆಗೆ ಪೊಲೀಸ್ ಒಬ್ಬರು ಸೇರಿಕೊಂಡ ದರೋಡೆ ನಡೆಸಿರುವ ಪ್ರಕರಣ ಇದೀಗ ಬಯಲಿಗೆ ಬಂದಿದೆ. ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ.
ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಕಳ್ಳರ ಗ್ಯಾಂಗ್ ಗೆ ಸಾಥ್ ನೀಡಿದ್ದು, ಆತನನ್ನು ಇಲಾಖೆಯಿಂದ ಅಮಾನತು ಮಾಡಿ ಬಂಧಿಸಲಾಗಿದೆ.
ಘಟನೆಯ ವಿವರ
ರಘು ಎನ್ನುವ ಉದ್ಯಮಿ ಸೆ.12 ರಂದು ಬೆಳಿಗಿನ ಜಾವ ಬೈಕ್ ನಲ್ಲಿ 22 ಲಕ್ಷದ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು. ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗುತ್ತಿರುವಾಗ ಅವರಿಗೆ ಕಣ್ಣಿಗೆ ಖಾರದ ಪುಡಿ ಎರಚಿ ಹಣ ಒಡೆವೆ ದರೋಡೆ ಮಾಡಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಪ್ರಮುಖ ಆರೋಪಿ ತೌಸೀಫ್ ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ ನನ್ನು ಬಂಧಿಸಿದ್ದಾರೆ. ಕಳ್ಳತನಕ್ಕೆ ಸಾಥ್ ನೀಡಿದ ಬ್ರೂಸ್ ಪೇಟ್ ಠಾಣೆಯ ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷನನ್ನೂ ಬಂಧಿಸಲಾಗಿದೆ.
ಹೆಡ್ ಕಾನ್ಸಟೇಬಲ್ ಮೆಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರಾಗಿದ್ದರು. ಅಸೀಫ್ ಈ ಮೊದಲು ಹೋಮ್ ಗಾರ್ಡ್ ಕೆಲಸ ಮಾಡುತ್ತಿದ್ದ. ಆ ಸಲುಗೆಯಿಂದಲೇ ದರೋಡೆ ಮಾಡುವ ಪ್ಲಾನ್ ಮಾಡಲಾಗಿತ್ತು. ಆರೋಪಗಳನ್ನು ಬಂಧಿಸಿದಾಗ ಹೆಡ್ ಕಾನ್ಸಟೇಬಲ್ ಪಾತ್ರ ಇರುವುದು ಬಯಲಿಗೆ ಬಂದಿದೆ.
ದರೋಡೆ ಹಣದಲ್ಲಿ ಹೆಡ್ ಕಾನ್ಸಟೇಬಲ್ ಮೆಹಬೂಬ್ 9 ಲಕ್ಷ ಹಣವನ್ನು ಪಡೆದಿದ್ದಾರೆ. ಪೊಲೀಸರು ಸದ್ಯ 15 ಲಕ್ಷದ 91 ಸಾವಿರ ರೂ ನಗದು ಮತ್ತು116 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.