ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರ ಮೂರನೇ ಬಾರಿಗೆ ಉಪ ಚುನಾವಣೆಗೆ ಅಣಿಯಾಗಿದೆ. ಹಿಂದಿನ ಎರಡು ಉಪಚುನಾವಣೆಗಳಲ್ಲೂ ಸಿಂಗ್ ಕುಟುಂಬದವರೇ ಜಯ ಗಳಿಸಿದ್ದು, ಇದೀಗ ನಡೆಯುತ್ತಿರುವ ಉಪಚುನಾವಣೆಯಲ್ಲೂ ಸಿಂಗ್ ಕುಟುಂಬದ ನಾಗಾಲೋಟ ಮುಂದುವರಿಯಲಿದೆಯೇ ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.
Advertisement
ರಾಜ್ಯ ವಿಧಾನಸಭೆಗೆ 1967ರಲ್ಲಿ ನಡೆದ ಮೂರನೇ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಆರ್ .ನಾಗನಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಪಿ.ನಾಗಲಿಂಗಯ್ಯ, ಜಂಬಣ್ಣ ಕೋರಿಶೆಟ್ಟಿ ಎಂಬುವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಅಂದು 67,576 ಮತಗಳಿದ್ದು, ಚುನಾವಣೆಯಲ್ಲಿ 36,544 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 2580 ಮತಗಳು ತಿರಸ್ಕೃತವಾಗಿದ್ದವು.
Related Articles
Advertisement
ನಂತರ ನಡೆದ 1978, 1983, 1985, 1989 ನಾಲ್ಕೂ ಚುನಾವಣೆಗಳಲ್ಲಿ ಸಿಂಗ್ ಕುಟುಂಬದಿಂದ ಯಾರೊಬ್ಬರೂ ಸ್ಪರ್ಧಿಸಿಲ್ಲ. 1989ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನತಾದಳ ಪಕ್ಷದ ಅಭ್ಯರ್ಥಿ ಗುಜ್ಜಲ ಹನುಮಂತಪ್ಪ 63,805 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್. ಅಬ್ದುಲ್ ವಹಾಬ್ (31603) ವಿರುದ್ಧ 32,202 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದರು. ಈ ವೇಳೆಗಾಗಲೇ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಪೈಕಿ 1,06,279 ಮತಗಳು ಚಲಾವಣೆಯಾಗಿ 6272 ಮತಗಳು ತಿರಸ್ಕೃತಗೊಂಡಿದ್ದವು.
1991ರ 2ನೇ ಉಪ ಚುನಾವಣೆ: ಗುಜ್ಜಲ ಹನುಮಂತಪ್ಪ ಶಾಸಕರಾದ ಕೆಲವೇ ವರ್ಷಗಳಲ್ಲಿ ನಿಧನರಾದರು. ಇದರಿಂದ ಹೊಸಪೇಟೆ ವಿಧಾನಸಭೆ ಕ್ಷೇತ್ರಕ್ಕೆ 1991ರಲ್ಲಿ ಎರಡನೇ ಬಾರಿಗೆ ಉಪ ಚುನಾವಣೆ ನಡೆದಿದ್ದು, ಆಗ ಸಿಂಗ್ ಕುಟುಂಬದ ರತನ್‌ಸಿಂಗ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರು. ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಶಂಕರಗೌಡ, ಜನತಾದಳದಿಂದ ಗುಂಡಿ ಭರಮಪ್ಪ ಕಣಕ್ಕಿಳಿದಿದ್ದರು.
ಕಾಂಗ್ರೆಸ್‌ನ ರತನ್‌ಸಿಂಗ್ 27,021 ಮತಗಳನ್ನು ಪಡೆದು, ಬಿಜೆಪಿಯ ಶಂಕರಗೌಡ (26588) ವಿರುದ್ಧ ಕೇವಲ 433 ಮತಗಳ ಅಂತರದಿಂದ ಜಯ ಗಳಿಸಿದರು. ಜನತಾದಳದ ಗುಂಡಿ ಭರಮಪ್ಪ 18,908 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕಿಳಿದರು. ಕ್ಷೇತ್ರದಲ್ಲಿ 1,63,474 ಮತಗಳ ಪೈಕಿ 82,730 ಮತಗಳು ಚಲಾವಣೆಯಾಗಿದ್ದು, 6555 ಮತಗಳು ತಿರಸ್ಕೃತಗೊಂಡಿದ್ದವು.
3ನೇ ಉಪಚುನಾವಣೆ: ಅನರ್ಹ ಶಾಸಕ ಆನಂದ್‌ಸಿಂಗ್ ರಾಜೀನಾಮೆಯಿಂದ ವಿಜಯನಗರ ಕ್ಷೇತ್ರ ಇದೀಗ ಮೂರನೇ ಉಪ ಚುನಾವಣೆಗೆ ಅಣಿಯಾಗಿದೆ. ಬಿಜೆಪಿಯಿಂದ ಆನಂದ್ ಸಿಂಗ್ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯ ಕೊರತೆ, ಕ್ಷೇತ್ರದಲ್ಲಿ ಸಿಂಗ್ ವರ್ಚಸ್ಸು ಸೇರಿ ಮೂರನೇ ಉಪ ಚುನಾವಣೆಯಲ್ಲೂ ‘ಸಿಂಗ್’ ಕುಟುಂಬದ ಗೆಲುವಿನ ಪರ್ವ ಮುಂದುವರಿಯಲಿದೆಯೇ ಕಾದು ನೋಡಬೇಕಿದೆ.