Advertisement

ರಾಹುಲ್‌ ಬಳಿಕ ಖರ್ಗೆ ಪ್ರಧಾನಿ: ಬಸವರಾಜ ರಾಯರೆಡ್ಡಿ

05:38 PM Apr 10, 2019 | Naveen |

ಕುರುಗೋಡು: ದೇಶದಲ್ಲಿ ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ರಾಹುಲ್‌ ನಂತರದ ಪ್ರಧಾನಿ ಮಲ್ಲಿಕಾರ್ಜುನ ಖರ್ಗೆ ಆಗಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಭವಿಷ್ಯ
ನುಡಿದರು.

Advertisement

ಪಟ್ಟಣ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಅನೇಕ ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಹೈದ್ರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲು ಖರ್ಗೆ ಕಾರಣ. ಸೋಲಿಲ್ಲದ ಸರದಾರ ಖರ್ಗೆಗೆ ಮುಂದಿನ ಪ್ರಧಾನಿಯಾಗುವ
ಭವಿಷ್ಯಯಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದೊರೆತ ಪಕ್ಷದಲ್ಲಿ ರಾಹುಲ್‌
ಗಾಂಧಿ ಅವರು ಪ್ರಧಾನಮಂತ್ರಿ ಆಗದಿದ್ದರೆ, ನಂತರದ ಪ್ರಧಾನಿ
ಮಲ್ಲಿಕಾರ್ಜುನ ಖರ್ಗೆ ಅವರದ್ದಾಗಿದೆ ಎಂದರು.

ನರೇಂದ್ರ ಮೋದಿ ಸರ್ಕಾರ ಚುನಾವಣಾ ಪೂರ್ವದ ಭರವಸೆ ಈಡೇರಿಸದೆ, 5 ವರ್ಷದಲ್ಲಿ ಮೋದಿ ಅವರು ವಿದೇಶ ಸುತ್ತಿದ್ದಾರೆ. ಮೇಕ್‌ ಇನ್‌ ಇಂಡಿಯಾ ಇಲ್ಲ. ಮೋದಿ
ಸರ್ಕಾರ ಹಿಟ್ಲರ್‌ ಸರ್ಕಾರವಾಗಿದೆ. ಸುಳ್ಳಿನ ಸರದಾರ ಹಾಗೂ ಶೂಟ್‌, ಬೂಟಿನ ಮೋದಿಗೆ ಈ ಬಾರಿ ಮತದಾರರೆ ತಕ್ಕಪಾಠ ಕಲಿಸಲಿದ್ದಾರೆ. ಮತ್ತೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ
ಬಂದರೆ, ದೇಶವನ್ನು ದಿವಾಳಿಯನ್ನಾಗಿ ಮಾಡಲಿದ್ದಾರೆ ಎಂದರು.

ದೇಶದ ಜನತೆಗೆ ಕಾಂಗ್ರೆಸ್‌ ಅನೇಕ ಯೋಜನೆಗಳನ್ನು ನೀಡಿದೆ. ಕಾಂಗ್ರೆಸ್‌
ಬಿರುಗಾಳಿ ಬೀಸಿದೆ. ಹೈದ್ರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ
ನೀಡಿದ್ದು ಕಾಂಗ್ರೆಸ್‌. ದೇಶದಲ್ಲಿ ಜಾತಿ ಧರ್ಮದ ರಾಜಕಾರಣ ಮಾಡುವ
ಬಿಜೆಪಿ ಪಕ್ಷವನ್ನು ದೇಶದಿಂದ ತೊಲಗಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು. ಕ್ಷೇತ್ರದ ಅಭಿವೃದ್ಧಿ ಕಾಳಜಿ ಹೊಂದಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ ಅವರಿಗೆ
ಮತ ನೀಡುವ ಮೂಲಕ ಕಾಂಗ್ರೆಸ್‌ಗೆ ಕೈಬಲಪಡಿಸಬೇಕು ಎಂದರು.

ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ ಮಾತನಾಡಿ, ಸುಳ್ಳು ಭರವಸೆಯೊಂದಿಗೆ
ಬಿಜೆಪಿ 5 ವರ್ಷ ಕಾಲಹರಣ ಮಾಡಿದೆ. ರೈತರ ಸಾಲಮನ್ನಾ
ಮಾಡದೆ, ಬಂಡವಾಳಶಾಹಿಗಳ ಸಾಲಮನ್ನಾ ಮಾಡಿ, ರೈತರಿಗೆ
ದ್ರೋಹ ಬಗೆದಿದೆ. ರಾಜಕೀಯ ಪ್ರೇರಿತ ಐಟಿ ದಾಳಿಯಾಗಿದೆ. ದೇಶದ
ಅಭಿವೃದ್ಧಿ ಕಾಳಜಿ ಇಲ್ಲದ ಬಿಜೆಪಿಗೆ ಮತದಾರರು ಸರಿಯಾಗಿ ಬುದ್ಧಿ
ಕಲಿಸಲಿದ್ದಾರೆ. ನುಡಿದಂತೆ ನಡೆದ ಕಾಂಗ್ರೆಸ್‌ಗೆ ಮತದಾರರು ಈ ಬಾರಿ
ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಾಜಿ ಶಾಸಕ ಬಿ.ಎಂ.ನಾಗರಾಜ ಮಾತನಾಡಿದರು. ಈ ವೇಳೆ ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ, ಗೋಪಾಲರೆಡ್ಡಿ, ಎನ್‌.ಕರಿಬಸಪ್ಪ, ನಾಗರುದ್ರಗೌಡ, ಎಸ್‌. ಎಂ.ನಾಗರಾಜಸ್ವಾಮಿ, ಸುಬ್ಟಾರೆಡ್ಡಿ,
ಸಣ್ಣ ಕರಿಯಪ್ಪ, ವಿ.ರೇಣುಕಾ, ಆರ್‌.ಪೊಂಪನಗೌಡ, ಸತ್ಯಪ್ಪ, ಎಂ.ಅಮದ್‌ ಸಾಬ್‌, ಬಿ.ನಾಗೇಂದ್ರ, ಬಿಚುಗತ್ತಿ ಮಲ್ಲಯ್ಯ, ಬಡವಲಿ ಸಾಬ್‌, ಪೊಂಪಯ್ಯಸ್ವಾಮಿ, ರಾರಾವಿ
ವೆಂಕಟೇಶ್‌, ಮಲ್ಲಿಕಾರ್ಜುನಸ್ವಾಮಿ, ಬಿ.ಕೆ.ರಘು, ಡಿ.ನಾಗರಾಜ, ಬಸವರಾಜ
ಮಳಿಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next