Advertisement

ಉತ್ಸಾಹದಿಂದ ಮತ ಹಕ್ಕು ಚಲಾಯಿಸಿ

04:32 PM Apr 19, 2019 | Naveen |

ಬಳ್ಳಾರಿ: ಮತದಾನ ಅತ್ಯಂತ ಅಮೂಲ್ಯವಾಗಿದ್ದು, ಮತದಾರರು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ಮುಕ್ತ ಮತ್ತು ನಿರ್ಭಿತಿಯಿಂದ ಹಾಗೂ ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಬೇಕು ಅಪರ ಜಿಲ್ಲಾ ಚುನಾವಣಾಧಿಕಾರಿ ಎಂ. ಸತೀಶಕುಮಾರ್‌ ಹೇಳಿದರು.

Advertisement

ಲೋಕಸಭಾ ಚುನಾವಣೆ ನಿಮಿತ್ತ ನಗರದ ಕೇಂದ್ರ (ಹೊಸ) ಬಸ್‌ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ವತಿಯಿಂದ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅಭಿಯಾನದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಹಬ್ಬವಾದ ಮತದಾನ ಪ್ರಕ್ರಿಯೆ ಇದೇ ಏ.23ರಂದು ನಡೆಯಲಿದ್ದು, ಸರ್ವರೂ ಉತ್ಸಾಹದಿಂದ ಬಂದು ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಸಂವಿಧಾನ ನಮಗೆ ಕಲ್ಪಿಸಿರುವ ಅಮೂಲ್ಯ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬಾರದು. ಯೋಗ್ಯ ವ್ಯಕ್ತಿಗೆ ಮತಚಲಾಯಿಸಬೇಕು
ಎಂದರು.

ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮತದಾನದ ಮಹತ್ವ,
ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಗ ಕೈಗೊಂಡಿರುವ ಕ್ರಮಗಳು, ಮತಗಟ್ಟೆಗೆ ತೆರಳಬೇಕಾದ ಸಂದರ್ಭದಲ್ಲಿರಬೇಕಾದ ದಾಖಲೆಗಳು, ಚುನಾವಣಾ ರಾಯಭಾರಿಗಳ ಸಂದೇಶಗಳನ್ನು ವಸ್ತುಪ್ರದರ್ಶನದಲ್ಲಿ ಭಿತ್ತರಿಸಿರುವುದು ಶ್ಲಾಘನೀಯ ಎಂದರು.

ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ-ವಿಜಲ್‌ ಆ್ಯಪ್‌ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ಮತದಾರರು ಅತ್ಯಂತ ಖುಷಿಯಿಂದ ಬಂದು ಮತದಾನ ಮಾಡುವ ನಿಟ್ಟಿನಲ್ಲಿ ನೀರು- ನೆರಳು, ವ್ಹೀಲ್‌ ಚೇರ್‌, ಭೂತಗನ್ನಡಿ, ವಾಹನದ ವ್ಯವಸ್ಥೆ, ರ್‍ಯಾಂಪ್‌ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿ ಸಿದಂತೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿ
ಯನ್ನು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ನೆರೆದಿದ್ದ ಎಲ್ಲರಿಗೆ ಬೋಧಿಸಿದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ, ಸಣ್ಣ ಉಳಿತಾಯ ಇಲಾಖೆಯ
ಅಭಿವೃದ್ಧಿ ಅಧಿಕಾರಿ ಹೊನ್ನೂರಪ್ಪ, ಕಾರ್ಮಿಕ ಇಲಾಖೆಯ ಶಿವರಾಜ್‌, ವಾರ್ತಾ ಇಲಾಖೆಯ ಅ ಧೀಕ್ಷಕ ಗುರುರಾಜ ಸೇರಿದಂತೆ
ಎನ್‌ಇಕೆಎಸ್‌ಆರ್‌ಟಿಸಿ ಹಾಗೂ ವಿವಿಧ ಇಲಾಖೆಗಳ ನೌಕರರು ಮತ್ತು ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next