Advertisement

ಬೆಳ್ಳಂದೂರು, ವರ್ತೂರು ಕೆರೆ ಪರಿಶೀಲಿಸಿದ ಲೋಕಾಯುಕ್ತ

12:36 PM Jun 21, 2017 | Team Udayavani |

ಮಹದೇವಪುರ: ಬೆಳ್ಳಂದೂರು ಕೆರೆ ಸ್ವಚ್ಚಗೊಳಿಸುವಂತೆ ಎನ್‌ಜಿಟಿ ಆದೇಶ ನೀಡಿದ್ದರೂ, ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಾಚರಣೆ ಕೈಗೊಂಡಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರು ಮಂಗಳವಾರ ಅಧಿಕಾರಿಗಳ ಜತೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಪರಿಶೀಲಿಸಿದರು. 

Advertisement

ಈ ವೇಳೆ ಮಾತನಾಡಿದ ಅವರು, “ಕೆರೆ ಸ್ವಚ್ಚತೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಆದರೆ ಇಲ್ಲಿಯ ಸ್ಥಿತಿ ಭಿನ್ನವಾಗಿದೆ. ವಸತಿ ಸಮುಚ್ಚಯಗಳು, ಕೈಗಾರಿಕೆಗಳು, ಸಣ್ಣ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಕೆರೆ, ಕಾಲುವೆಗಳಿಗೆ ಬಿಡಲಾಗುತ್ತಿದೆ. ಹೀಗಾಗಿ ಕೆರೆ ಸಂಪೂರ್ಣ ಕಲುಷಿತಗೊಂಡಿದೆ.

ಬೆಳ್ಳಂದೂರು, ವರ್ತೂರು, ರಾಂಪುರ ಕೆರೆಗಳಲ್ಲದೆ ನಗರದ ಇತರೆ ಕೆರೆಗಳು ಕಲುಷಿತಗೊಂಡು ಅಂತರ್ಜಲ ಸೇರಿ ಕೃಷಿ ಭೂಮಿಗೆ, ಜಾನುವಾರುಗಳಿಗೆ ವಿಷವುಣಿಸುತ್ತಿವೆ. ಕೆರೆ ಸ್ವಚ್ಚತೆಗೆ ಸರ್ಕಾರ ಶಾಶ್ವತ ಕ್ರಮಗಳನ್ನು ಅನುಸರಿಸಿ ಸ್ವಚ್ಚತೆಗೆ ಮುಂದಾಗಬೇಕು. ಸಾರ್ವಜನಿಕರೂ ಸಹ ಕೆರೆಯ ಸ್ವಚ್ಚತೆಗೆ ಕೈಜೋಡಿಸಬೇಕು,’ ಎಂದು ಸೂಚಿಸಿದರು. 

ಕೆರೆ ಶುದ್ಧೀಕರಿಸಲು ಬಿಡಿಎ, ಬಿಬಿಎಂಪಿ ಕೈಗೊಂಡಿರುವ ಕ್ರಮಗಳನ್ನು ಅಧಿಕಾರಗಳ ತಂಡದೊಂದಿಗೆ ತೆರಳಿ ಲೋಕಾಯುಕ್ತರು ಪರಿಶೀಲಿಸಿದರು. ಬಿಡಿಎ ಮುಖ್ಯ ಅಭಿಯಂತರ ಪಿ.ನಾಯಕ್‌, ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್‌, ಪರಿಸರ ಇಲಾಖೆ ಅಧಿಕಾರಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next