Advertisement

ತಮಿಳಿಗೆ ಬೆಲ್‌ ಬಾಟಮ್‌

05:53 AM Dec 29, 2018 | |

ರಿಷಬ್‌ ಶೆಟ್ಟಿ ನಾಯಕರಾಗಿರುವ “ಬೆಲ್‌ ಬಾಟಮ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ಮುನ್ನವೇ ಚಿತ್ರತಂಡ ಖುಷಿಯಾಗಿದೆ. ಅದಕ್ಕೆ ಕಾರಣ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ರೀಮೇಕ್‌ ಹಕ್ಕು ಮಾರಾಟವಾಗಿರುವುದು.

Advertisement

ಹೌದು, “ಬೆಲ್‌ ಬಾಟಮ್‌’ ಚಿತ್ರದ  ತಮಿಳು ರೀಮೇಕ್‌ ಹಕ್ಕು ಮಾರಾಟವಾಗಿದೆ. ತಮಿಳಿನ ಎನ್‌ಎಚ್‌ ಹರಿ ಸಿಲ್ವರ್‌ ಸ್ಕ್ರೀನ್ಸ್‌ “ಬೆಲ್‌ ಬಾಟಮ್‌’ ಚಿತ್ರದ ರೀಮೇಕ್‌ ಹಕ್ಕು ಪಡೆದಿದ್ದು, ಸತ್ಯಶಿವ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ.

“ಬೆಲ್‌ ಬಾಟಮ್‌’ ಚಿತ್ರ 80ರ ದಶಕದ ಕಥೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತಹ ಪರಿಸರದಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ರಿಷಬ್‌ ಶೆಟ್ಟಿ ಡಿಟೆಕ್ಟೀವ್‌ ದಿವಾಕರ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದು, ಅವರ ಗೆಟಪ್‌ ಕೂಡಾ ಭಿನ್ನವಾಗಿದೆ. ಉಳಿದಂತೆ ಯೋಗರಾಜ ಭಟ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next