Advertisement

Fraud Case 120ಕ್ಕೂ ಅಧಿಕ ಮಂದಿಗೆ ಲಕ್ಷಾಂತರ ರೂ. ವಂಚನೆ: ಬಂಧನಕ್ಕೆ ಆಗ್ರಹ

11:42 PM Jun 11, 2024 | Team Udayavani |

ಮಂಗಳೂರು: ಬಲ್ಮಠದ ಲಕ್ಷ್ಮೀ ಟವರ್ನಲ್ಲಿ ಕಚೇರಿ ಹೊಂದಿದ್ದ “ಕೆನರಾ ಫಿಶ್‌ ಫಾರ್ಮರ್ ವೆಲ್‌ಫೇರ್‌ ಪ್ರೊಡ್ನೂಸರ್‌ ಕಂಪೆನಿ’ ಮಂಗಳೂರು ಮತ್ತು ಕೇರಳ ಭಾಗದ 120 ಮಂದಿಗೆ ಒಟ್ಟು 55.18 ಲ.ರೂ. ವಂಚಿಸಿರುವುದು ಬೆಳಕಿಗೆ ಬಂದಿದ್ದು ಆರೋಪಿಗಳನ್ನು ಬಂಧಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಹಾಗೂ ವಂಚನೆಗೊಳಗಾದವರು ಆಗ್ರಹಿಸಿದ್ದಾರೆ.

Advertisement

ಹೆಚ್ಚು ಲಾಭಾಂಶ ನೀಡುವುದಾಗಿ ಹೂಡಿಕೆ ಮಾಡಿಸಿ ವಂಚಿಸಲಾಗಿದೆ. ಈಗ ಸಂಸ್ಥೆಯ ಮಂಗಳೂರಿನ ಕಚೇರಿ ಮುಚ್ಚಲ್ಪಟ್ಟಿದೆ. ಈ ಕಂಪೆನಿಯು ಕರ್ನಾಟಕ ಮಾತ್ರವಲ್ಲದೆ ಕೇರಳ ರಾಜ್ಯದಲ್ಲಿಯೂ ಬೇರೆ ಬೇರೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಮಾಹಿತಿ ಇದೆ. ನೂರಾರು ಗ್ರಾಹಕರಿಗೆ 100 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವಂಚಿಸಿರುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಈಗಾಗಲೇ 120 ಮಂದಿ ಸಂತ್ರಸ್ತರು ದೂರು ನೀಡಿದ್ದಾರೆ. ಕದ್ರಿ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಕಂಪೆನಿಗೆ ಸಂಬಂಧಿಸಿದವರನ್ನು ಬಂಧಿಸಿ ಸಂತ್ರಸ್ತರ ಹಣ ವಾಪಸ್‌ ಕೊಡಿಸಬೇಕು. ಇಂತಹ ವಂಚನೆ ಮಾಡುವ ಕಂಪೆನಿಗಳು ಕಾರ್ಯಾಚರಿಸದಂತೆ ತಡೆಯಲು ಕ್ರಮಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next