Advertisement

ಭಗವಂತನಲ್ಲಿ ನಂಬಿಕೆ ಇರಲಿ: ಮರಿಸಿದ್ಧಬಸವ ಸ್ವಾಮೀಜಿ

05:02 PM Oct 07, 2017 | Team Udayavani |

ಬಳಗಾನೂರು: ಸದ್ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಶ್ರದ್ಧೆ ಭಕ್ತಿಯಿಂದ ಮಾಡುವ ಪ್ರಾರ್ಥನೆಯನ್ನು ಭಗವಂತನು ಸ್ವೀಕರಿಸುತ್ತಾನೆ. ಭಗವಂತನಲ್ಲಿ ಸದೃಢವಾದ ನಂಬಿಕೆಯನ್ನು ಪ್ರತಿಯೊಬ್ಬರೂ ಹೊಂದಬೇಕು. ಸದ್ಭಕ್ತರ ಇಷ್ಟಾರ್ಥ ಈಡೇರಿಸುವ ಶಕ್ತಿ ಭಗವಂತನಲ್ಲಿದೆ ಎಂದು ವಿರಕ್ತ ಮಠದ ಶ್ರೀ ಮರಿಸಿದ್ಧಬಸವ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಶ್ರೀವಿರಕ್ತ ಮಠದಲ್ಲಿ ವಿಜಯ ದಶಮಿ ಆಚರಣೆ ಹಾಗೂ ಹುಣ್ಣಿಮೆ ಪ್ರಯುಕ್ತ ಒಂದೇ ದಿನದಲ್ಲಿ ಸಮಗ್ರ ಶ್ರೀದೇವಿ ಪುರಾಣ ಪ್ರವಚನ ಹಾಗೂ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಂದಿರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ದೇಶ ಭಕ್ತಿ, ಪರೋಪಕಾರ, ಸಂಪ್ರದಾಯ ಆಚರಣೆ ಕುರಿತು ನಂಬಿಕೆ ಮೂಡುವಂತೆ ಮಕ್ಕಳನ್ನು ಬೆಳೆಸಬೇಕು. ಮನುಷ್ಯನ ಶುಚಿಯಾದ ಅಂತರಾತ್ಮದಲ್ಲಿ ದೇವರು ನೆಲೆಸಿರುತ್ತಾನೆ.

ಅಂತರಾತ್ಮವನ್ನು ಶುಚಿಯಾಗಿಟ್ಟುಕೊಂಡಿರುವ ಮನುಷ್ಯನನ್ನು ದೇವರು ರಕ್ಷಿಸುತ್ತಾನೆ. ಶ್ರದ್ಧೆ, ಭಕ್ತಿ, ದಾನ ಧರ್ಮ ಪರೋಪಕಾರದಂತಹ ಅಮುಲ್ಯವಾದ ಗುಣಗಳನ್ನು ಹೊಂದಿರುವ ಮನುಷ್ಯನು ದೇವರಿಗೆ ಹತ್ತಿರವಾಗಿರುತ್ತಾನೆ
ಎಂದರು.

ಪುರಾಣ ಪ್ರವಚನ ನೀಡಿದ ಚಿದಾನಂದಗವಾಯಿಗಳು ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿದರು.

Advertisement

ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಡಾ|ಶರಭಯ್ಯಸ್ವಾಮಿ ಗಣಾಚಾರಿಮಠ, ತಬಲಾ ವಾದಕ ಎಸ್‌. ಬಸವರಾಜ ಇದ್ದರು. ಸಂಜೆ ಪುರಾಣ ಮಹಾ ಮಂಗಲ ಕಾರ್ಯಕ್ರಮ ನಂತರ ಶ್ರೀ ದೇವಿಗೆ ಕುಂಕುಮಾರ್ಚನೆ, ವಿಶೇಷ ಪೂಜೆ,
200 ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಶ್ರೀ ಮರಿಸಿದ್ಧಬಸವಸ್ವಾಮಿಗಳು ನೆರವೇರಿಸಿದರು.

ನಿವೃತ್ತ ಆರ್‌ಟಿಒ ಸಿದ್ದಲಿಂಗಪ್ಪ, ಡಾ| ಶರಭಯ್ಯಸ್ವಾಮಿ ಗಣಾಚಾರಿಮಠ, ಚಿದಾನಂದ ಗವಾಯಿಗಳು, ತಬಲಾ ವಾದಕ ಎಸ್‌. ಬಸವರಾಜ, ವಿಶ್ವಕರ್ಮ ಶಾಸ್ತ್ರಿಗಳಾದ ಚನ್ನಬಸವಶಾಸ್ತ್ರಿ, ಬಸವರಾಜಸ್ವಾಮಿ, ಪತ್ರಕರ್ತ ಹನುಮೇಶ ಕಮ್ಮಾರ ಸೇರಿದಂತೆ ಶ್ರೀಮಠಕ್ಕೆ ಸೇವೆ ಸಲ್ಲಿಸಿದ ಸದ್ಭಕ್ತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.

ಪ್ರಮುಖರಾದ ಬಸವಲಿಂಗಯ್ಯಸ್ವಾಮಿ, ಶಿವಮೂರ್ತಿಶಾಸ್ತ್ರಿ, ಮುಖಂಡರಾದ ಮರಿಯಪ್ಪ ಅಂಬ್ಲಿ, ಸಂಜಯಕುಮಾರ, ವೀರಯ್ಯಸ್ವಾಮಿ, ಸಂಗಪ್ಪ ಮಾಕಾಪುರ ಪಂಪಾಪತಿ ಕೊಂಡರೆಡ್ಡಿ, ಸೂರ್ಯನರಸಿಂಹ, ಬಸವರಾಜ, ವಿರುಪಾಕ್ಷಪ್ಪ,
ಅಮರೇಗೌಡ ಗುಡಗಲದಿನ್ನಿ, ದೇವೇಂದ್ರಪ್ಪ, ಲಿಂಗಪ್ಪ, ಕಂಠೆಪ್ಪ, ಬಸವರಾಜ, ವೆಂಕಟೇಶ ಮಡಿವಾಳ, ಹನುಮಂತಪ್ಪ, ವಿರುಪಾಕ್ಷಪ್ಪ, ಸಿದ್ದಪ್ಪ ಸೇರಿದಂತೆ ಶ್ರೀಮಠದ ಸದ್ಭಕ್ತರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next