Advertisement
ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದ ಶ್ರೀಲಂಕಾ ತಂಡ ಅಫ್ಘಾನಿಸ್ಥಾನ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರೂ ಉತ್ತಮ ಬೌಲಿಂಗ್‌ನಿಂದಾಗಿ ಜಯ ಸಾಧಿಸಲು ಯಶಸ್ವಿಯಾಗಿದೆ.
“ನಮ್ಮ ಬಗ್ಗೆ ನಮಗೆ ನಂಬಿಕೆಯಿದೆ. ನಮ್ಮದು ಅತ್ಯಂತ ಅನುಭವಿ ಬೌಲಿಂಗ್ ಪಡೆ. ಈ ಕಾರಣಕ್ಕಾಗಿ ನಮ್ಮಲ್ಲಿ 5 ಮಂದಿ ವೇಗಿಗಳಿದ್ದಾರೆ’ ಎಂದು ಪೆರೆರ ಹೇಳಿದರು.
“ನಾವು ವಿಕೆಟ್ ಪಡೆಯುತ್ತಿರಬೇಕು. ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿ ನಮ್ಮ ಮೂಲ ಯೋಜನೆಯಂತೆ ಆಡುವುದು ಮುಖ್ಯವಾಗಿದೆ ‘ ಎಂದು ಪೆರೆರ ಹೇಳಿದರು.
ಕಿವೀಸ್ ವಿರುದ್ಧ 136 ರನ್ನಿಗೆ ಆಲೌಟಾಗಿದ್ದ ಶ್ರೀಲಂಕಾ, ಅಫ್ಘಾನಿಸ್ಥಾನದೆದುರು ಉತ್ತಮ ಆರಂಭ ಪಡೆದಿತ್ತು. ಕುಸಲ್ ಪೆರೆರ 78 ರನ್ ಹೊಡೆದಿದ್ದರು. ಆದರೆ ಮತ್ತೆ ಬ್ಯಾಟಿಂಗ್ ದುರಂತ ಕಂಡ ಶ್ರೀಲಂಕಾ 88 ರನ್ ಅಂತರದಲ್ಲಿ 9 ವಿಕೆಟ್ ಉರುಳಿಸಿಕೊಂಡಿತು. ಬ್ಯಾಟಿಂಗ್‌ನಲ್ಲಿ ನಾವು ನಿರಾಶಾದಾಯಕ ನಿರ್ವಹಣೆ ನೀಡಿದ್ದೇವೆ. ಒಳ್ಳೆಯ ಆರಂಭ ಪಡೆದ ಬಳಿಕ ನಾವು ಇಸ್ಪೀಟ್ ಎಲೆಗಳಂತೆ ವಿಕೆಟ್ ಕಳೆದುಕೊಂಡೆವು ಎಂದರು.
Related Articles
Advertisement
ಪಂದ್ಯಶ್ರೇಷ್ಠ: ನುವಾನ್ ಪ್ರದೀಪ್.
ಗೆಲುವಿನಿಂದ ಆತ್ಮವಿಶ್ವಾಸಬ್ಯಾಟಿಂಗ್ನಲ್ಲಿ ಸಂಘಟಿತ ನಿರ್ವಹಣೆ ನೀಡಲು ನಾವು ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ. ಈ ಗೆಲುವಿನಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೂಟದ ಇನ್ನುಳಿದ ಪಂದ್ಯಗಳಿಗೆ ಈ ಗೆಲುವು ಪ್ರೇರಣೆಯಾಗಲಿದೆ’ ಎಂಬುದು ನಾಯಕ ದಿಮುತ್ ಕರುಣರತ್ನೆ ಪ್ರತಿಕ್ರಿಯೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಬೇಕಾಗಿದೆ. ಒಂದು ವೇಳೆ ಬ್ಯಾಟಿಂಗ್‌ನಲ್ಲಿ ಶ್ರೀಲಂಕಾ ಗಮನಾರ್ಹ ನಿರ್ವಹಣೆ ನೀಡಿದರೆ ಸುಲಭ ಗೆಲುವಿನತ್ತ ಸಾಗಬಹುದು ಎಂದು ಕೋಚ್ ಚಂಡಿಕ ಹತುರುಸಿಂಘ ಹೇಳಿದ್ದಾರೆ. ಎಕ್ಸ್‌ಟ್ರಾ ಇನ್ನಿಂಗ್ಸ್
ಶ್ರೀಲಂಕಾ-ಅಫ್ಘಾನಿಸ್ಥಾನ
-ರಶೀದ್ ಖಾನ್ 100 ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ಅಫ್ಘಾನಿಸ್ಥಾನದ 7ನೇ ಕ್ರಿಕೆಟಿಗನೆನಿಸಿದರು. ಉಳಿದವರೆಂದರೆ ನಬಿ (184), ಅಸYರ್ ಅಫ್ಘಾನ್ (163), ಶಾಜಾದ್ (151), ಸಮಿಯುಲ್ಲ ಶೆನ್ವರಿ (143), ದೌಲತ್ ಜದ್ರಾನ್ (112) ಮತ್ತು ನಜೀಬುಲ್ಲ ಜದ್ರಾನ್ (108).
– ಮೊಹಮ್ಮದ್ ನಬಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸ್ಪೆಲ್ ದಾಖಲಿಸಿದ ಅಫ್ಘಾನ್ ಬೌಲರ್ ಎನಿಸಿದರು (9-0-30-4). ಹಿಂದಿನ ದಾಖಲೆ ಶಪೂರ್ ಜದ್ರಾನ್ ಹೆಸರಲ್ಲಿತ್ತು (2015ರ ಸ್ಕಾಟ್ಲೆಂಡ್ ಎದುರಿನ ಡ್ಯುನೆಡಿನ್ ಪಂದ್ಯ, 10-1-38-4).
– ಲಹಿರು ತಿರಿಮನ್ನೆ 100 ಏಕದಿನ ಇನ್ನಿಂಗ್ಸ್‌ಗಳಲ್ಲಿ 3 ಸಾವಿರ ರನ್ ಪೂರ್ತಿಗೊಳಿಸಿದರು. ಅವರು ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದ ಲಂಕೆಯ 3ನೇ ಬ್ಯಾಟ್ಸ್‌ಮನ್. ಮೊದಲೆರಡು ಸ್ಥಾನದಲ್ಲಿರುವವರು ಉಪುಲ್ ತರಂಗ (93 ಇನ್ನಿಂಗ್ಸ್) ಮತ್ತು ಮರ್ವನ್ ಅತ್ತಪಟ್ಟು (94 ಇನ್ನಿಂಗ್ಸ್).
– ಲಸಿತ ಮಾಲಿಂಗ 325 ವಿಕೆಟ್ ಉರುಳಿಸಿದರು. ಏಕದಿನದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರಲ್ಲಿ ಅವರಿಗೀಗ 10ನೇ ಸ್ಥಾನ.
– ಅಫ್ಘಾನಿಸ್ಥಾನ ವಿಶ್ವಕಪ್‌ನಲ್ಲಿ ತನ್ನ 2ನೇ ಕನಿಷ್ಠ ಮೊತ್ತ ದಾಖಲಿಸಿತು (152 ಆಲೌಟ್). ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ಪರ್ತ್‌ನಲ್ಲಿ 142ಕ್ಕೆ ಆಲೌಟ್ ಆದದ್ದು ಅಫ್ಘಾನ್ ತಂಡದ ಕನಿಷ್ಠ ಮೊತ್ತವಾಗಿದೆ.
– ಶ್ರೀಲಂಕಾ ವಿಶ್ವಕಪ್ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತವನ್ನು ಉಳಿಸಿ ಕೊಂಡಿತು (187). ಇದಕ್ಕೂ ಮೊದಲು 2003ರ ಕೂಟದಲ್ಲಿ ವಿಂಡೀಸ್ ಎದುರು ಕೇವಲ 229 ರನ್ ಗಳಿಸಿ ಗೆದ್ದು ಬಂದದ್ದು ದಾಖಲೆಯಾಗಿದೆ.
– ಶ್ರೀಲಂಕಾದ ವಿಶ್ವಕಪ್ ಇತಿಹಾಸಲ್ಲಿ ಪೇಸ್ ಬೌಲರ್‌ಗಳು 4ನೇ ಸಲ ಸರ್ವಾಧಿಕ 9 ವಿಕೆಟ್ ಉರುಳಿಸಿದರು.
– ವಿಶ್ವಕಪ್‌ನಲ್ಲಿ ಶ್ರೀಲಂಕಾ ಕೊನೆಯ 8 ವಿಕೆಟ್‌ಗಳಿಂದ ಕನಿಷ್ಠ 57 ರನ್ ಗಳಿಸಿತು. 1975ರ ಕೂಟದಲ್ಲಿ ವೆಸ್ಟ್ ಇಂಡೀಸ್ ಎದುರು 81 ರನ್ ಗಳಿಸಿದ್ದು ಈವರೆಗಿನ ಕನಿಷ್ಠ ಮೊತ್ತವಾಗಿತ್ತು.
– ಲಸಿತ ಮಾಲಿಂಗ ಅವರನ್ನೊಳಗೊಂಡ ಶ್ರೀಲಂಕಾ ತಂಡ 2017ರ ಜುಲೈ 6ರ ಬಳಿಕ ಮೊದಲ ಜಯ ದಾಖಲಿಸಿತು.