Advertisement

ರಾಜ್ಯ ಶ್ವಾನದಳಕ್ಕೆ ಬೆಲ್ಜಿಯಂ ಅತಿಥಿಗಳು

10:18 AM Sep 21, 2019 | Team Udayavani |

ಬೆಂಗಳೂರು: ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಪೊಲೀಸರಿಗೆ ನೆರ ವಾಗುವ ರಾಜ್ಯ ಶ್ವಾನದಳಕ್ಕೆ ಎರಡು “ಬೆಲ್ಜಿಯಂ ಅತಿಥಿ’ಗಳ ಆಗಮನ ವಾಗಿದೆ. ಈ ಶ್ವಾನಗಳು ಸ್ಫೋಟಕ ವಸ್ತು ಹಾಗೂ ಮಾದಕ ವಸ್ತು ಪತ್ತೆಯಲ್ಲಿ ಪರಿಣತವಾಗಿವೆ.

Advertisement

ಬೆಂಗಳೂರು ದಕ್ಷಿಣ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆಗೆ ಸೇರಿದ ಶ್ವಾನ ದಳದಲ್ಲಿರುವ “ನಿಧಿ’ ಎಂಬ ಹೆಣ್ಣು ಹಾಗೂ “ರಾಣಾ’ ಎಂಬ ಗಂಡು ಶ್ವಾನ ಒಂದು ರೀತಿಯಲ್ಲಿ ಸೈನಿಕರ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಅತ್ಯಂತ ಸೂಕ್ಷ್ಮ ಬುದ್ಧಿ ಹಾಗೂ ಕ್ರಿಯಾಶೀಲತೆಯಿಂದ ಸೂಚಿಸಿದ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ.

ಸಾಮಾನ್ಯವಾಗಿ ಬೆಲ್ಜಿಯಂನ ಮೆಲೊನಿಸ್‌ ತಳಿಯ ಶ್ವಾನ ಮರಿಗಳು ಅತ್ಯಂತ ದುಬಾರಿ. ನುರಿತ ಅಧಿಕಾರಿಗಳಿರುವ ಶ್ವಾನ ಖರೀದಿ ಸಮಿತಿ ಇರುವ ತಂಡದ ಸಲಹೆ ಮತ್ತು ಸರಕಾರದ ಬೇಡಿಕೆ ಮೇರೆಗೆ 20ರಿಂದ 25 ಸಾವಿರ ರೂ.ಗೆ ಮರಿಗಳನ್ನು ಖರೀದಿಸಲಾಗಿದೆ.

ವಿಶೇಷತೆ ಏನು?
ಬೇರೆ ತಳಿಗೆ ಹೋಲಿಸಿದರೆ ಇವುಗಳ ತೂಕ ಕಡಿಮೆ. ಹೆಚ್ಚು ಸಮಯ ಕೆಲಸ ಮಾಡಿಸಬಹುದು. ವಾಸನೆ ಗ್ರಹಿಸುವ ಶಕ್ತಿ ಅಧಿಕ.ಒಂದು ಜಾಗದಿಂದ ಮತ್ತೂಂದು ಜಾಗಕ್ಕೆ ಕರೆ ದೊಯ್ಯ ಬಹುದು. ಹಾಗೆಯೇ 10-15 ಅಡಿ ಎತ್ತರ ಜಿಗಿಯುವ ಸಾಮರ್ಥ್ಯ ಹೊಂದಿವೆ. ಹೆಚ್ಚಾಗಿ ಇವುಗಳನ್ನು ಸ್ಫೋಟಕ ವಸ್ತುಗಳ ಪತ್ತೆ ಗಾಗಿಯೇ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next