ಪಣಜಿ: ಗೋವಾದ ದಬೋಲಿಮ್ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ಬೆಲ್ಜಿಯಂ ಪ್ರಜೆಯೊಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಮುಂಬೈಗೆ ವಿಮಾನ ಹತ್ತುವಾಗ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಬೆಲ್ಜಿಯಂ ಪ್ರಜೆ ಬ್ರೈಸ್ ಎಮಿಲಿ ಆಂಟೋನಿ ಜಿ (47) ಎಂಬಾಕೆಯನ್ನು ಬಂಧಿಸಲಾಗಿದೆ.
ಟ್ರ್ಯಾಕಿಂಗ್ ಸಾಧನವನ್ನು ಹೊತ್ತೊಯ್ದಿದ್ದಕ್ಕಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೋವಾ ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ವಾಸ್ಕೋದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಶೇಖ್ ಅವರು ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ, ಈ ವಿದೇಶಿಯ ಪ್ರಜೆಯ ವಿರುದ್ಧ ಟ್ರ್ಯಾಕರ್ ಸಾಧನವನ್ನು ಹೊಂದಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಅವರ ಸಾಧನವು ಜಿಪಿಎಸ್ ಟ್ರ್ಯಾಕರ್ ಸಾಧನವಾಗಿತ್ತು ಎನ್ನಲಾಗಿದೆ.
ಅವರು ವಿಮಾನ ಹತ್ತುವಾಗ ಸಾಧನವನ್ನು ಕೊಂಡೊಯ್ಯುತ್ತಿದ್ದರು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.