Advertisement

Belgavi; ಜೈಲಿನಲ್ಲಿ ಆತ್ಮಹ*ತ್ಯೆಗೆ ಯತ್ನಿಸಿದ್ದ ಕೈದಿ ಸಾ*ವು

02:44 PM Oct 16, 2024 | Team Udayavani |

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಕೈದಿ ಚಿಕಿತ್ಸೆ ಫಲಿಸದೇ ಬುಧವಾರ(ಅ16) ಮೃತಪಟ್ಟಿದ್ದಾನೆ.

Advertisement

ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇರುವ ಬಳ್ಳಾರಿ ಮೂಲದ ಗಿರೀಶ ಎಂಬ ಕೈದಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಕೈದಿ ಗಿರೀಶನ್ನು ಗಮನಿಸಿದ ಸಹ ಕೈದಿಗಳು ತತ್ ಕ್ಷಣ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಈತನನ್ನು ಬಿಮ್ಸ್ ಗೆ ದಾಖಲಿಸಲಾಗಿತ್ತು. ‌ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next