Advertisement
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶಿವಶಂಕರ ಹಿರೇಮಠ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ನಂತರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಗೋಪಾಲ ಕೃಷ್ಣ ಪೈ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಸಂತೋಷ ತಂದಿದೆ. ಕನ್ನಡ ಕಾರ್ಯಕ್ರಮವನ್ನು ಗಡಿಭಾಗದಲ್ಲಿ ಹೆಚ್ಚಾಗಿ ನಡೆಸಬೇಕು. ಇದರಿಂದ ಕನ್ನಡಕ್ಕೆ ಇನ್ನಷ್ಟು ಮೆರಗು ಬಂದಂತಾಗುತ್ತದೆ ಎಂದರು. ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಸಸಾಲಟ್ಟಿ ಸ್ವಾಗತಿಸಿದರು. ಎಲ್.ಎಸ್. ಶಾಸ್ತ್ರಿ, ಎಂ.ಎಸ್. ಇಂಚಲ, ವಿ.ಎನ್. ಜೋಶಿ, ಬಿ.ಎಸ್. ಗವಿಮಠ, ಎಂ. ಕೃಷ್ಣರಾವ, ಡಾ| ಬಸವರಾಜ ಜಗಜಂಪಿ, ಸುಭಾಷ ಇರಜಿ, ಬಿ.ಎಸ್. ಗವಿಮಠ, ಮೋಹನ ಕಳಸದ, ಎ.ಎ. ಸನದಿ, ದೀಪಿಕಾ ಚಾಟೆ, ಹೇಮಾ ಸೊನ್ನೋಳ್ಳಿ, ಡಾ| ರವೀಂದ್ರ ತೋಟಗೇರಿ, ವಿ. ಹಡಗಿನಾಳ, ವಿಜಯಕುಮಾರ ಜೀರಗ್ಯಾಳ, ಎಂ.ವೈ. ಮೆಣಸಿನಕಾಯಿ, ಮೋಹನ ಕಳಸದ, ಅಶೋಕ ಮಳವಳಿ, ಮೋಹನ ಗಡಾದ, ನೀಲಗಂಗಾ ಚರಂತಿಮಠ ಇದ್ದರು. ಸುನಂದಾ ಎಮ್ಮಿ ನಿರೂಪಿಸಿ, ವಂದಿಸಿದರು. Advertisement
23ರಂದು ಬೆಳಗಾವಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ
10:01 AM Jun 12, 2019 | Suhan S |
Advertisement
Udayavani is now on Telegram. Click here to join our channel and stay updated with the latest news.