Advertisement
ಉಡುಪಿಯಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ಹೊಸ ಮುಖ್ಯಮಂತ್ರಿಯೊಂದಿಗೆ ಬೆಳಗಾವಿ ಅಧಿವೇಶನ ನಡೆಯಲಿದೆ. ನ.23ರ ಬಳಿಕ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವುದಿಲ್ಲ ಎಂದರು.
ಕಾಂಗ್ರೆಸ್ಗೆ ಮುಸ್ಲಿಂ ತುಷ್ಟೀಕರಣ ಹೊಸದೇನಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಮರ ಋಣ ತೀರಿಸಬೇಕು ಅನಿಸುತ್ತಿದೆ. ಹೀಗಾಗಿಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಅವರಿಗೆ ಅನಿಸುತ್ತಿಲ್ಲ. ಕಳೆದ ಬಾರಿ ಅಧಿಕಾರ ಪಡೆದಾಗ ಟಿಪ್ಪು ಜಯಂತಿ ಮಾಡಿ ಅದನ್ನು ವರ್ಣ ರಂಜಿತ ಗೊಳಿಸಿದ್ದರು. ಈಗ ವಕ#… ಆಸ್ತಿಗೆ ಬೇಲಿ ಹಾಕಲು 350 ಕೋಟಿ ರೂ. ಬಿಡುಗಡೆ ಮಾಡುವೆ ಎಂದು ಟಿಪ್ಪಣಿ ಬರೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. ರಾಜ್ಯಾಧ್ಯಕ್ಷರೇ ಪರಮೋಚ್ಚ
ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ನಾಯಕತ್ವದಲ್ಲಿ ಯಾವುದೇ ಗೊಂದಲ ಇಲ್ಲ. ನಮಗೆ ಅಧ್ಯಕ್ಷರೇ ಪರಮೋಚ್ಚ. ಸಣ್ಣಪುಟ್ಟ ಅಭಿಪ್ರಾಯ ಭೇದ ಇದ್ದರೆ ಅದನ್ನು ನಮ್ಮ ನಾಯಕರು ಸರಿಪಡಿಸಲಿದ್ದಾರೆ ಎಂದು ಹೇಳಿದರು.
Related Articles
Advertisement