Advertisement

ಬೆಳಗಾವಿ ಗಲಭೆ: 27 ಜನರ ಬಂಧನ

06:15 AM Dec 20, 2017 | Team Udayavani |

ಬೆಳಗಾವಿ: ನಗರದಲ್ಲಿ ಸೋಮವಾರ ತಡರಾತ್ರಿ ಕಲ್ಲು ತೂರಾಟ, ವಾಹನ-ಮನೆಗಳಿಗೆ ಬೆಂಕಿ ಹಚ್ಚಿ  ಗಲಭೆ  ನಡೆಸಿದ ಪ್ರಕರಣ ಸಂಬಂಧ 27 ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Advertisement

ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಮಂಗಳವಾರ ಜನಜೀವನ ಎಂದಿ ನಂತಿರಲಿಲ್ಲ. ಮಧ್ಯಾಹ್ನದ ಅನಂತರ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಯಿತು. ಪೊಲೀಸರು ಎಲ್ಲೆಡೆಯೂ ಕಣ್ಗಾವಲು ಇಟ್ಟಿದ್ದು, ಗಲಭೆ ನಡೆಸಿದವರ ಮಾಹಿತಿಯನ್ನು ಸಿಸಿ ಕೆಮರಾ, ಮೊಬೈಲ್‌ಗ‌ಳಲ್ಲಿ ಸೆರೆಯಾದ ಚಿತ್ರಗಳ ಮೂಲಕ  ಕಲೆ ಹಾಕುತ್ತಿದ್ದಾರೆ. ಬಂಧಿತರ ಸಂಖ್ಯೆ  ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಘಟನೆಯಲ್ಲಿ ಆಟೋ, ಮೂರು ಬೈಕ್‌, 2 ಮನೆ ಹಾಗೂ ಗೋದಾಮಿಗೆ ಬೆಂಕಿ ಹಚ್ಚಲಾಗಿತ್ತು. ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್‌ ಹಾಗೂ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಲಾಗಿದೆ. ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದ ದುಷ್ಕರ್ಮಿಗಳು  ಮುಖಕ್ಕೆ ಬಟ್ಟೆ ಕಟ್ಟಿ ಕೊಂಡು ಗಲಭೆ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next